ಅಫ್ಜಲ್ ಗುರು ಹುತಾತ್ಮನಾದರೆ, ಯೋಧ ಹನುಮಂತಪ್ಪ ಯಾರು?
ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್, ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗುತ್ತಿರುವವರಿಗೆ ತಮ್ಮ ಕವನದ...

Published On :
ನವದೆಹಲಿ: ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಟ್ವಿಟರ್‌ನಲ್ಲಿ ದೇಶಭಕ್ತಿಯುಕ್ಕಿಸುವ ಕವನವೊಂದನ್ನು ಶೇರ್ ಮಾಡಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್, ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗುತ್ತಿರುವವರಿಗೆ ತಮ್ಮ ಕವನದ ಮೂಲಕ ಚಾಟಿಯೇಟು ನೀಡಿದ್ದಾರೆ.
ದತ್ ಅವರು ಹಿಂದಿಯಲ್ಲಿ ಕವನ ರಚಿಸಿದ್ದು, ಈ ಕವನ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಅವರು ಬರೆದ ಹಿಂದಿ ಕವನದ ಕನ್ನಡ ಅನುವಾದ ಹೀಗಿದೆ.
ಅಫ್ಜಲ್‌ನನ್ನು ಕೊಂಡಾಡುವುದಕ್ಕೇನು ನಿನ್ನಲಿ ಘಜನಿಯ ರಕ್ತ ತುಂಬಿದೆಯೇ
ಈ ದೇಶದಲ್ಲಿ ನೀ ಹುಟ್ಟಿದ್ದರೂ, ಅದನ್ನೇ ಶತ್ರು ಅಂತೀಯಾ
ಭಾರತ ಮಾತೆಯನು ಅವಮಾನ ಮಾಡುವ ಭಾಷೆಯನ್ನೇ ಬಳಸುತ್ತಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲೇ ದೇಶದ ಗೌರವಕ್ಕೆ ಧಕ್ಕೆ ತಂದೆಯಾ
ಅಫ್ಜಲ್‌ನ್ನು ಹುತಾತ್ಮನೆನ್ನುವೆ, ಹಾಗಾದರೆ ಹನುಮಂತಪ್ಪನನ್ನು ಏನನ್ನುತ್ತೀ?
ಇವರು ಸಾಗುತ್ತಿರುವ ದಾರಿಯೇ ಅವರ ಗುರಿ ಯಾವುದೆಂದು ನನಗೆ ಹೇಳುತ್ತಿದೆ
ತನ್ನ ಅಮ್ಮನಲ್ಲೇ ಜಗಳವಾಡಿ ಅದೇನು ಅಧಿಕಾರ ಗಳಿಸುತ್ತೀ?
ನೀ ಜೈಕಾರ ಕೂಗುತ್ತಿರುವ ದೇಶವಿದೆಯಲ್ಲಾ, ಅಲ್ಲಿ ನೀನು ಕಾಫಿರ್ ಅಷ್ಟೇ
ನಾವು ಅಫ್ಜಲ್‌ನ್ನು ಕೊಲ್ಲುತ್ತೇವೆ, ನೀನು ಮತ್ತೆ ಅವನನ್ನು ಹುಟ್ಟಿಸು
ನಿನ್ನಂಥಾ ನಪುಂಸಕರಿಗೆ ಹೊಡೆತ ನೀಡುವುದು ಭಾರತೀಯ ಸೇನೆ
ನೀನು ಜಗಳಕ್ಕಾಗಿ ಕರೆದರೆ, ನಾವು ಬರದೇ ಇರುವಷ್ಟು ಕಷ್ಟವಿಲ್ಲ
ಭಾರತವನ್ನು ನಾಶ ಪಡಿಸುತ್ತೀಯಾ, ನಿನ್ನ ಯೋಗ್ಯತೆಯೇನಿದೆ ಹೇಳು
ಪೆನ್ನು ಹಿಡಿದ ಕೈಯೊಂದು ಗನ್ ಹಿಡಿಯದಂತಾಗಲಿ
ಅಫ್ಜಲ್‌ಗಾಗಿ ಹೋರಾಡುವ ಜನರು ನಮ್ಮಿಂದಲೇ ಹತ್ಯೆಯಾಗದಿರಲಿ
ಭಗತ್ ಸಿಂಗ್ ಮತ್ತು ಆಜಾದ್‌ನಂತವರು ಇಲ್ಲೂ ಇದ್ದಾರೆ ನೋಡೀಗ
ಒಂದು ಇಂಕ್ವಿಲಾಬ್ ಅಷ್ಟೇ ಸಾಕು ಈಗ
ಈ ದೇಶದ ನಾಶಕ್ಕಾಗಿ ಕೂಗುವ ಸದ್ದಡಗಲೇ ಬೇಕು
ಈ ದೇಶ ನಿನ್ನದು, ಇದು ನಮ್ಮದು, ನಾವೆಲ್ಲರೂ ಗೌರವಿಸೋಣ
ನಾವು ಹುಟ್ಟಿದ ಭೂಮಿ ಇದು, ಅಭಿಮಾನವನ್ನು ಮೆರೆಯೋಣ, ಜೈ ಹಿಂದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


