ಕ್ರೀಡೆ

ಮಹಿಳಾ ಟಿ-20 ವಿಶ್ವಕಪ್: ಆಸ್ಟ್ರೇಲಿಯಾ ಪ್ರವಾಸ ತಂಡವನ್ನೇ ಕಣಕ್ಕಿಳಿಸಲಿರುವ ಭಾರತ

ಮುಂಬರುವ ಟಿ-20 ವಿಶ್ವಕಪ್ ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಆಸಿಸ್ ಪ್ರವಾಸ ಕೈಗೊಂಡಿದ್ದ ಅದೇ ತಂಡವನ್ನು ಟಿ-20 ವಿಶ್ವಕಪ್ ಸರಣಿಗೂ ಮುಂದುವರೆಸಲಾಗಿದೆ...

ಮಹಿಳಾ ಟಿ-20 ವಿಶ್ವಕಪ್: ಆಸ್ಟ್ರೇಲಿಯಾ ಪ್ರವಾಸ ತಂಡವನ್ನೇ ಕಣಕ್ಕಿಳಿಸಲಿರುವ ಭಾರತ
ನಾಯಕಿ ಮಿಥಾಲಿ ರಾಜ್ ಮತ್ತು ತಂಡ (ಸಂಗ್ರಹ ಚಿತ್ರ)
Published On :

ನವದೆಹಲಿ: ಮುಂಬರುವ ಟಿ-20 ವಿಶ್ವಕಪ್ ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಆಸಿಸ್ ಪ್ರವಾಸ ಕೈಗೊಂಡಿದ್ದ ಅದೇ ತಂಡವನ್ನು ಟಿ-20 ವಿಶ್ವಕಪ್ ಸರಣಿಗೂ ಮುಂದುವರೆಸಲಾಗಿದೆ.

ಇದೇ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಮಹಿಳಾ ಟಿ-20 ವಿಶ್ಪಕಪ್ ಆರಂಭವಾಗಲಿದ್ದು, ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡಕ್ಕೆ ಮಿಥಾಲಿ ರಾಜ್ ನೇತೃತ್ವ ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕಠಿಣ ಆಸ್ಟ್ರೇಲಿಯಾ ನೆಲದಲ್ಲಿ ಟಿ-20 ಸರಣಿ ಗೆದ್ದು ದಾಖಲೆ ನಿರ್ಮಿಸಿರುವ ಅದೇ ತಂಡವನ್ನು ವಿಶ್ವಕಪ್ ಸರಣಿಗೂ ಮುಂದುವರೆಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡ, 3 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು 101 ರನ್ ಗಳ ಅಂತರದಿಂದ ಕೈ ಚೆಲ್ಲಿದೆ.

ಟಿ-20 ವಿಶ್ವಕಪ್ ಸರಣಿಗೆ ಆಯ್ಕೆಯಾಗಿರುವ ಭಾರತ ಮಹಿಳಾ ತಂಡ ಇಂತಿದೆ.
ಮಿಥಾಲಿ ರಾಜ್ (ನಾಯಕಿ), ಜೂಲನ್ ಗೋಸ್ವಾಮಿ, ಸ್ಮೃತಿ ಮಂದನಾ, ವೇದಾ ಕೃಷ್ಣ ಮೂರ್ತಿ, ಹರ್ಮನ್ ಪ್ರೀತ್ ಕೌರ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ಸುಷ್ಮಾ ವರ್ಮಾ, ಪೂನಂ ಯಾದವ್, ವಿಆರ್ ವನಿತಾ, ಅನುಜಾ ಪಾಟೀಲ್, ಏಕ್ತಾ ಬಿಷ್ಟ್, ತಿರುಷ್ ಕಾಮಿನಿ ಎಂಡಿ, ದೀಪ್ತಿ ಶರ್ಮಾ, ನಿರಂಜನಾ ನಾಗರಾಜನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.