ಕ್ರೀಡೆ

ರೆನಾಲ್ಡೊಗೆ ಯುಇಎಫ್ಎ ಶ್ರೇಷ್ಠ ಆಟಗಾರ ಪ್ರಶಸ್ತಿ

ರಿಯಲ್ ಮಾಡ್ರಿಡ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಐರೋಪ್ಯ ಫುಟ್‌ಬಾಲ್ ಸಂಘಗಳ ಒಕ್ಕೂಟ(ಯುಇಎಫ್ಎ) ದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ರೆನಾಲ್ಡೊಗೆ ಯುಇಎಫ್ಎ ಶ್ರೇಷ್ಠ ಆಟಗಾರ ಪ್ರಶಸ್ತಿ
ಕ್ರಿಸ್ಟಿಯಾನೊ ರೊನಾಲ್ಡೊ
Published On :

ಮೊನಾಕೊ: ರಿಯಲ್ ಮಾಡ್ರಿಡ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಐರೋಪ್ಯ ಫುಟ್‌ಬಾಲ್ ಸಂಘಗಳ ಒಕ್ಕೂಟ(ಯುಇಎಫ್ಎ) ದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮ್ಯಾಡ್ರಿಡ್ ಕ್ಲಬ್ ತಂಡದ ಮತ್ತಿಬ್ಬರು ಆಟಗಾರರಾದ ಗರೆಥ್ ಬೇಲ್ ಮತ್ತು ಅಟ್ಲೆಟಿಕೊ ಮ್ಯಾಡ್ರಿಡ್ ನ ಆಂಟೋನಿ ಗ್ರಿಯೇಜ್ ಮನ್ ಅವರನ್ನು ಹಿಂದಿಕ್ಕಿ ರೊನಾಲ್ಡೊ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡನೇ ಬಾರಿ ಈ ಪ್ರಶಸ್ತಿಯನ್ನು ಗೆದ್ದಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೊನಾಲ್ಡೊ, ಪ್ರಶಸ್ತಿ ಗೆದ್ದಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಆದರೆ ಉಳಿದ ಇಬ್ಬರೂ ಆಟಗಾರರು ಪ್ರಶಸ್ತಿಗೆ ಸಮಾನವಾಗಿ ಅರ್ಹರಾಗಿದ್ದರು ಎಂದು ಹೇಳಿದ್ದಾರೆ.

2013-14 ನೇ ಸಾಲಿನಲ್ಲೂ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದ ರೆನಾಲ್ಡೊ, ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಲಿಯೊನೆಲ್ ಮೆಸ್ಸಿ(2 ಬಾರಿ) ಸಾಧನೆಯನ್ನು ಸರಿಗಟ್ಟಿದ್ದಾರೆ. ಫೀಫಾದ ಕಳೆದ ಸೀಸನ್ ನಲ್ಲಿ ಯುರೋಪಿಯನ್ ಚಾಂಪಿಯನ್ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಲು ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್ ತಂಡಕ್ಕೆ ರೊನಾಲ್ಡೊ ನೆರವಾಗಿದ್ದರು.ಜುಲೈನಲ್ಲಿ ನಡೆದ ಯುರೋ 2016ರಲ್ಲಿ ಪೋರ್ಚುಗಲ್ ತಂಡ ರೊನಾಲ್ಡೊ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಯುಇಎಫ್‌ಎನ 55 ಸದಸ್ಯ ರಾಷ್ಟ್ರಗಳ ಪತ್ರಕರ್ತರು ಪ್ರಶಸ್ತಿ ಆಯ್ಕೆಗೆ ಮತದಾನ ಮಾಡಿದ್ದು, ಗುರುವಾರ ನಡೆದ ಚಾಂಪಿಯನ್ಸ್ ಲೀಗ್ ಡ್ರಾ ಪ್ರಕ್ರಿಯೆ ವೇಳೆ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.