"ಜಮೈಕನ್ ಕಿಂಗ್" ಉಸೇನ್ ಬೋಲ್ಟ್ ಗೆ ಮತ್ತೊಂದು ಚಿನ್ನದ ಪದಕ
ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 200 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದಾರೆ.

ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 200 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದಾರೆ.
ರಿಯೋ ಡಿಜನೈರೋದಲ್ಲಿ ನಡೆದ 200 ಮೀ, ಪುರುಷರ ಓಟದ ಫೈನಲ್ ಸ್ಪರ್ಧೆಯಲ್ಲಿ ಉಸೇನ್ ಬೋಲ್ಟ್ ದಾಖಲೆಯ ಕೇವಲ 19.19 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಸತತ ಮೂರನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ 100 ಮತ್ತು 200 ಮೀಟರ್ ಓಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ 3ನೇ ಬಾರಿಗೆ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ ಬೋಲ್ಟ್ ಪಾತ್ರರಾಗಿದ್ದಾರೆ.
ಅಲ್ಲದೆ ಈ ಹಿಂದೆ ತಮ್ಮದೇ ಹೆಸರಿಲ್ಲಿದ್ದ 19.78 ಸೆಕೆಂಡ್ ಗಳ ದಾಖಲೆ ಓಟವನ್ನು ಬೋಲ್ಟ್ ಮುರಿದಿದ್ದು, ಕೇವಲ 19.19 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ. ಕೆನಡಾದ ಆ್ಯಂಡ್ರೆ ಡಿ ಗ್ರಾಸ್ಸೆ ಅವರು 20.02 ಸೆಕೆಂಡ್ ಗಳಲ್ಲಿ ಗುರಿಮುಟ್ಟಿ 2 ನೇಸ್ಥಾನ ಪಡೆದ ಬೆಳ್ಳಿ ಪದಕ ಪಡೆದರೆ, ಫ್ರಾನ್ಸ್ ನ ಕ್ರಿಸ್ಟೋಫ್ ಲೆಮೈಟ್ರೆ ಅವರು 20.12 ಸೆಕೆಂಡ್ ಗಳಲ್ಲಿ ಗುರಿಮುಟ್ಟಿ ಕಂಚಿನ ಪದಕ ಪಡೆದಿದ್ದಾರೆ.
ಈ ಹಿಂದೆ ಸೋಮವಾರ ನಡೆದಿದ್ದ 100 ಮೀಟರ್ ಸ್ಪರ್ಧೆಯಲ್ಲೂ ಬೋಲ್ಟ್ ಗೆ ಪೈಪೋಟಿ ನೀಡಿದ್ದ ಕೆನಡಾದ ಆ್ಯಂಡ್ರೆ ಡಿ ಗ್ರಾಸ್ಸೆ ಅವರು ಕಂಚಿನ ಪದಕ ಪಡೆದಿದ್ದರು.
ನನಸಾಗುವತ್ತ ಬೋಲ್ಟ್ ತ್ರಿವಳಿ-ತ್ರಿವಳಿ ಕನಸು
ಈ ಹಿಂದೆ 100, 200 ಮತ್ತು 4*100 ಮೀಟರ್ ಓಟದಲ್ಲಿ ಸತತ 2 ಬಾರಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದ ಬೋಲ್ಟ್, ಈ ಬಾರಿಯೂ ಅದೇ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನಗೆದ್ದಿರುವ ಬೋಲ್ಟ್ 4*100 ಮೀಟರ್ ಓಟದ ಸ್ಪರ್ಧೆಯಲ್ಲಿಯೂ ಚಿನ್ನೆ ಗೆದ್ದರೆ ಅಭೂತಪೂರ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಒಲಿಂಪಿಕ್ಸ್ 3 ಬಗೆಯ ಓಟದಲ್ಲಿ ಸತತ 3ನೇ ಬಾರಿಗೆ ಚಿನ್ನ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


