ಕ್ರೀಡೆ

ಸಾಕ್ಷಿ ಮಲಿಕ್ ಗೆಲುವಿಗೆ ಪಾಕಿಸ್ತಾನ ಪತ್ರಕರ್ತನ ಟೀಕೆ: ರೀ ಟ್ವೀಟ್ ಮಾಡಿ ಚಾಟಿ ಬೀಸಿದ ಬಿಗ್ ಬಿ ಅಮಿತಾಬ್

ಸಾಕ್ಷಿ ಮಲಿಕ್ ವಿಜಯಕ್ಕೆ ಟ್ವಿಟರ್​ನಲ್ಲಿ ಪಾಕಿಸ್ತಾನ ಪತ್ರಕರ್ತ ಓಮರ್ ಕುರೇಶಿ, ಭಾರತ ಗೆದ್ದಿರುವುದು ಕಂಚಿನ ಪದಕವಾದರೂ...

ಸಾಕ್ಷಿ ಮಲಿಕ್ ಗೆಲುವಿಗೆ ಪಾಕಿಸ್ತಾನ ಪತ್ರಕರ್ತನ ಟೀಕೆ: ರೀ ಟ್ವೀಟ್ ಮಾಡಿ ಚಾಟಿ ಬೀಸಿದ ಬಿಗ್ ಬಿ ಅಮಿತಾಬ್
ಸಾಕ್ಷಿ ಮಲಿಕ್ ಮತ್ತು ಅಮಿತಾಬ್ ಬಚ್ಚನ್
Published On :

ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಪ್ರದರ್ಶನದ ಬಗ್ಗೆ ಇಡೀ ದೇಶವೇ ಹೆಮ್ಮೆಯಿಂದ ಖುಷಿ ಪಡುತ್ತಿದೆ.

ಆದರೆ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪ್ರಥಮ ಪದಕ ಕಂಚಿನ ಪದಕ ತಂದು ಕೊಟ್ಟ ಸಾಕ್ಷಿ  ಮಲಿಕ್ ವಿಜಯಕ್ಕೆ ಟ್ವಿಟರ್​ನಲ್ಲಿ ಪಾಕಿಸ್ತಾನ ಪತ್ರಕರ್ತ ಓಮರ್ ಕುರೇಶಿ, ಭಾರತ ಗೆದ್ದಿರುವುದು ಕಂಚಿನ ಪದಕವಾದರೂ 20 ಚಿನ್ನ ಪದಕ ಗೆದ್ದಂತೆ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಜೊತೆಗೆ ಪಾಕಿಸ್ತಾನ ಈ ಹಿಂದೆ ಕುಸ್ತಿ ಸೇರಿದಂತೆ ಇತರ ಕ್ರೀಡೆಗಳಲ್ಲಿ ಪಡೆದ ಪದಕ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅನೇಕರು ಟ್ವಿಟ್ಟರ್ ನಲ್ಲಿ ಓಮರ್ ಕುರೇಶಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನೂ ಓಮರ್ ಕುರೇಶಿ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಚಾಟಿ ಬೀಸಿದ್ದಾರೆ.  ಪದಕದ ಖಾತೆ ತೆರೆದು ಹೊಸ ಉತ್ಸಾಹ ಮೂಡಿಸಿರುವ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿರುವುದು ನಮಗೆ 20 ಚಿನ್ನದ ಪದಕ ಗೆದ್ದಷ್ಟೆ ಹರ್ಷವಾಗಿದೆ ಎಂದು ರೀಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.