ಕ್ರೀಡೆ

ರಿಯೋ: ಬೆಳ್ಳಿಗೆ ತೃಪ್ತರಾಗಬೇಕಿದ್ದ ಮಿಲ್ಲರ್ ಅಂತಿಮ ಕ್ಷಣದಲ್ಲಿ ಡೈವ್ ಮಾಡಿ ಚಿನ್ನ ಗೆದ್ದರು

ರಿಯೋ ಒಲಿಂಪಿಕ್ಸ್ ನ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಬಹಾಮಾ ಅಥ್ಲೀಟ್ ಶಾನೆ ಮಿಲ್ಲರ್ ಡೈವ್ ಮಾಡಿ ಗೆರೆ ಮುಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ...

ರಿಯೋ: ಬೆಳ್ಳಿಗೆ ತೃಪ್ತರಾಗಬೇಕಿದ್ದ ಮಿಲ್ಲರ್ ಅಂತಿಮ ಕ್ಷಣದಲ್ಲಿ ಡೈವ್ ಮಾಡಿ ಚಿನ್ನ ಗೆದ್ದರು
ಶಾನೆ ಮಿಲ್ಲರ್
Published On :
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಬಹಾಮಾ ಅಥ್ಲೀಟ್ ಶಾನೆ ಮಿಲ್ಲರ್ ಡೈವ್ ಮಾಡಿ ಗೆರೆ ಮುಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ. 
ಸ್ಪರ್ಧೆಯಲ್ಲಿ ಎಲ್ಲರೂ ಅಂತಿಮ ಗೆರೆಯನ್ನು ಕಾಲಿನಲ್ಲಿ ಮೆಟ್ಟಿ ಪ್ರಥಮ ಸ್ಥಾನ ಗಳಿಸಿದರೆ ಮಿಲ್ಲರ್ ಡೈವ್ ಮಾಡಿ ಮೊದಲಿಗರಾಗಿದ್ದಾರೆ. ಅಮೆರಿಕಾದ ಅಲಿಸನ್ ಫೆಲಿಕ್ಸ್ ಮತ್ತು ಶಾನೆ ಮಿಲ್ಲರ್ ಇಬ್ಬರು ಸಮಬಲರಾಗಿ ಓಡುತ್ತಿದ್ದರು. ಇನ್ನೇನು ಫೆಲಿಕ್ಸ್ ಅಂತಿಮ ಗೆರೆಯನ್ನು ಮುಟ್ಟಲಿದ್ದಾರೆ ಎಂದು ಗಮನಿಸಿದ ಮಿಲ್ಲರ್ ಈ ವೇಳೆ ಡೈವ್ ಹೊಡೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. 
ಇನ್ನು ಡೈವ್ ಮೂಲಕ ಅಂತಿಮ ಗೆರೆಯನ್ನು ಮುಟ್ಟುವುದು ನಿಯಮ ಬದ್ಧವೇ ಎಂಬುವುದು ಪ್ರೇಕ್ಷಕರ ಮನದಲ್ಲಿ ಮೂಡುವ ಪ್ರಶ್ನೆಯಾಗಿತ್ತು. ಈ ಓಟದಲ್ಲಿ ಇದು ನಿಯಮಬದ್ಧ. ಯಾವ ಓಟಗಾರ ಮೊದಲು ಹೊಟ್ಟೆಯ ಭಾಗವನ್ನು ಗೆರೆಗೆ ತಾಕಿಸುತ್ತಾನೋ ಅಥವಾ ಗೆರೆಯ ಮೇಲ್ಭಾಗಕ್ಕೆ ಸರಿಯಾಗಿ ಹೊಟ್ಟೆಯನ್ನು ತಂದಿರುತ್ತಾನೋ ಆತನೇ ವಿಜಯಿಯಾಗುತ್ತಾನೆ. 
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಮೆರಿಕದ ಡೇವಿಡ್ ನೆವಿಲ್ 400 ಮೀಟರ್ ಓಟದಲ್ಲಿ ಹೀಗೆ ಡೈವ್ ಮಾಡಿ ಕಂಚು ಗೆದ್ದಿದ್ದರು. ನೆವಿಲ್ ಡೈವ್ ಮಾಡಿದ್ದರಿಂದ ಎದುರಾಳಿಗಿಂತ 0.04 ಸೆಕೆಂಡ್ ಅಂತರದಲ್ಲಿ ಕಂಚು ಗೆಲ್ಲಲು ಸಾಧ್ಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.