ಕ್ರೀಡೆ

ಚಿನ್ನದೊಂದಿಗೆ ಪದಕ ಬೇಟೆ ಆರಂಭಿಸಿದ "ಉಸೇನ್ ಬೋಲ್ಟ್"

ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಮತ್ತೆ ಚಿನ್ನದ ಪದಕ ಬಾಚಿದ್ದು, ಈ ಮೂಲಕ ಸತತ ಮೂರು ಒಲಿಂಪಿಕ್​ನಲ್ಲಿ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಚಿನ್ನದೊಂದಿಗೆ ಪದಕ ಬೇಟೆ ಆರಂಭಿಸಿದ "ಉಸೇನ್ ಬೋಲ್ಟ್"
ಚಿನ್ನ ಗೆದ್ದ ಉಸೇನ್ ಬೋಲ್ಟ್ ಸಂಭ್ರಮ
Published On :

ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಮತ್ತೆ ಚಿನ್ನದ  ಪದಕ ಬಾಚಿದ್ದು, ಈ ಮೂಲಕ ಸತತ ಮೂರು ಒಲಿಂಪಿಕ್​ನಲ್ಲಿ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸೋಮವಾರ ಬೆಳಗ್ಗೆ ರಿಯೋ ಡಿ ಜನೈರೋದಲ್ಲಿ ನಡೆದ 100 ಮೀ ಓಟದ ಫೈನಲ್ ಪಂದ್ಯದಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಕೇವಲ 9.81 ಸೆಕೆಂಡ್​ ನಲ್ಲಿ ಗುರಿ ತಲುಪಿ  ತಮ್ಮದೇ ಈ ಹಿಂದಿನ ಸಾಧನೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಬೋಲ್ಟ್ ಗೆ ತೀವ್ರ ಪೈಪೋಟಿ ನೀಡಿದ ಅವರ ಸಾಂಪ್ರದಾಯಿಕ ಎದುರಾಳಿ ಅಮೆರಿಕದ ಜಸ್ಟಿನ್ ಗಾಟ್ಲಿನ್ 9.84 ಸೆಕೆಂಡ್​  ನಲ್ಲಿ ಗುರಿ ತಲುಪಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಕೆನಡಾದ ಆಂಡ್ರೆ ಡೆ ಗ್ರಾಸೆ 9.91 ಸೆಕೆಂಡ್​ ನಲ್ಲಿ ಗುರಿ ತಲುಪಿ, ಕಂಚಿನ ಪದಕ ಜಯಿಸಿದರು.

ಮೂರನೇ ಬಾರಿಗೆ ಮೂರು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಬೋಲ್ಟ್

ಇನ್ನು ಈ ಹಿಂದೆ 100 ಮತ್ತು 200 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಬೋಲ್ಟ್ ಲಂಡನ್ ಹಾಗೂ ಬೀಜಿಂಗ್ ಒಲಿಂಪಿಕ್​ನಲ್ಲಿ ತಲಾ ಮೂರು ಸ್ವರ್ಣ ಪದಕ ಜಯಿಸಿದ್ದರು. ರಿಯೋ ಡಿ  ಜನೈರೋದಲ್ಲಿ ನಡೆಯುತ್ತಿರುವ ಪ್ರಸಕ್ತ ಒಲಿಂಪಿಕ್​ನಲ್ಲಿಯೂ ಸಹ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಟ್ರಿಪಲ್ ಸಾಧನೆಯ ಭರವಸೆಯಲ್ಲಿದ್ದಾರೆ. ಬೋಲ್ಟ್ ಈಗಾಗಲೇ 100 ಮೀ ಓಟದಲ್ಲಿ  ಚಿನ್ನ ಬೇಟೆಯಾಡಿದ್ದು, ಉಳಿದಿರುವ 200 ಮೀ ಹಾಗೂ 4*100 ಮೀಟರ್ ಓಟದಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.