ರಿಯೊ ಒಲಿಂಪಿಕ್ ನಲ್ಲಿ ಭಾರತಕ್ಕೆ ಭರವಸೆ ಮೂಡಿಸಿರುವ ವಿಕಾಸ್, ಸಾನಿಯಾ-ಬೋಪಣ್ಣ ಜೋಡಿ
ಇಲ್ಲಿ ನಡೆಯುತ್ತಿರುವ 31ನೇ ಒಲಿಂಪಿಕ್ ಪಂದ್ಯದಲ್ಲಿ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಮತ್ತು ಟೆನ್ನಿಸ್ ತಾರೆಗಳಾದ ಸಾನಿಯಾ...

Published On :
ರಿಯೊ ಡಿ ಜನೈರೊ: ಇಲ್ಲಿ ನಡೆಯುತ್ತಿರುವ 31ನೇ ಒಲಿಂಪಿಕ್ ಪಂದ್ಯದಲ್ಲಿ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಮತ್ತು ಟೆನ್ನಿಸ್ ತಾರೆಗಳಾದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಭಾರತೀಯರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದ್ದಾರೆ.
ಪುರುಷರ ಮಿಡ್ಲ್ ವೈಟ್ 75 ಕೆಜಿ ವಿಭಾಗದಲ್ಲಿ ವಿಕಾಸ್ ಟರ್ಕಿಯ ಒಂಡರ್ ಸಿಪಲ್ ಅವರನ್ನು 3-0 ಅಂತರದಲ್ಲಿ ಸೋಲಿಸಿ ಕ್ಯಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪದಕ ಪಡೆಯಲು ಇನ್ನೊಂದೇ ಹೆಜ್ಜೆಯನ್ನು ವಿಕಾಸ್ ಕ್ರಮಿಸಬೇಕಾಗಿದ್ದು ಕೊನೆಯ ಹಂತದಲ್ಲಿ ಉಜೆಕಿಸ್ತಾನದ ಬೆಕ್ಟೆಮಿರ್ ಮೆಲಿಕುಜಿಎವ್ ಅವರನ್ನು ಸೋಲಿಸಿದ್ದಾರೆ.
ಭಾರತದ ಮಿಶ್ರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ನಲ್ಲಿ ಅಂತಿಮ ಎಂಟರ ಘಟ್ಟ ಪ್ರವೇಶಿಸಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಮತ್ತು ಜಾನ್ ಪೀರ್ಸ್ ಜೋಡಿ ವಿರುದ್ಧ 7-5, 6-4 ನೇರ ಸೆಟ್ ಗಳಲ್ಲಿ ಬೋಪಣ್ಣ-ಸಾನಿಯಾ ಜೋಡಿ ಜಯ ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Boxerಬಾಕ್ಸರ್Vikas Krishnan YadavSania Mirza-Rohan Bopannaವಿಕಾಸ್ ಕೃಷ್ಣ ಯಾದವ್ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


