ರಿಯೋ: 100 ಮೀ. ಬಟರ್ ಫ್ಲೈನಲ್ಲಿ ಮೈಕೆಲ್ ಫೆಲ್ಪ್ಸ್ ಹಿಂದಿಕ್ಕಿದ ಜೋಸೆಫ್ ಸ್ಕೂಲಿಂಗ್
ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ಇಂದು(ಶನಿವಾರ) ಬೆಳಗ್ಗೆ ನಡೆದ 100 ಮೀಟರ್ ಬಟರ್ ಫ್ಲೈಯಲ್ಲಿ ಅಮೆರಿಕದ...

Published On :
ರಿಯೊ ಡಿ ಜನೈರೊ: ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ಇಂದು(ಶನಿವಾರ) ಬೆಳಗ್ಗೆ ನಡೆದ 100 ಮೀಟರ್ ಬಟರ್ ಫ್ಲೈಯಲ್ಲಿ ಅಮೆರಿಕದ ದಾಖಲೆಯ ಈಜುಗಾರ ಮೈಕೆಲ್ ಫೆಲ್ಪ್ಸ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
21 ವರ್ಷದ ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ರಿಯೊ ಒಲಿಂಪಿಕ್ಸ್ ನಲ್ಲಿ 3 ಚಿನ್ನದ ಪದಕ ಸೇರಿದಂತೆ ಇದುವರಿಗಿನ ತಮ್ಮ ಒಲಿಂಪಿಕ್ಸ್ ವೃತ್ತಿಬದುಕಿನಲ್ಲಿ 26 ಪದಕಗಳನ್ನು ಗಳಿಸಿದ್ದ ಮೈಕೆಲ್ ಅವರನ್ನು ಸೋಲಿಸುವ ಮೂಲಕ ವಿಶ್ವದ ಕ್ರೀಡಾಪ್ರೇಮಿಗಳ ಗಮನ ಸೆಳೆದಿದ್ದಾರೆ.
ಮೈಕೆಲ್ ಗೆ ತಮ್ಮ ವೃತ್ತಿ ಬದುಕಿನಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಇನ್ನೊಂದು ಚಿನ್ನದ ಪದಕ ಪಡೆಯುವ ಅವಕಾಶವಿದೆ. 400 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆ ಇಂದು ರಾತ್ರಿ ನಡೆಯಲಿದೆ. 100 ಮೀಟರ್ ಬಟರ್ ಫ್ಲೈನಲ್ಲಿ ಅವರು ಇಂದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅವರ ಜತೆ ದಕ್ಷಿಣ ಆಫ್ರಿಕಾದ ಚದ್ ಲೆ ಕ್ಲೊಸ್ ಮತ್ತು ಹಂಗೇರಿಯಾದ ಲಸ್ಜ್ಲೋ ಕ್ಸೆಹ್ ಕೂಡ ಬೆಳ್ಳಿ ಪದಕ ಗಳಿಸಿದ್ದಾರೆ. ಸ್ಕೂಲಿಂಗ್ ಅವರ ಜಯದ ಸಮಯ 50.39 ಸೆಕೆಂಡ್ ಆದರೆ ಬೆಳ್ಳಿ ಪದಕ ಗಳಿಸಿದ್ದವರದ್ದು 51.14 ಸೆಕೆಂಡ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Michael PhelpsRio Olympicsರಿಯೊ ಒಲಿಂಪಿಕ್ಸ್100 meter butterflyJoseph Schooling100 ಮೀಟರ್ ಬಟರ್ ಫ್ಲೈಮೈಕೆಲ್ ಫೆಲ್ಪ್ಸ್ಜೋಸೆಫ್ ಸ್ಕೂಲಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


