ಕ್ರೀಡೆ

ಕಳಪೆ ಪ್ರದರ್ಶನದಿಂದ ಬೇರ್ಪಡಲು ಮುಂದಾದ ಸ್ಟಾರ್ ಜೋಡಿ ಸಾನಿಯಾ-ಹಿಂಗೀಸ್

ಟೆನ್ನಿಸ್ ಜಗತ್ತಿನ ನಂಬರ್ ಒನ್ ಮಹಿಳಾ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ ಲೆಂಡ್ ನ ಮಾರ್ಟಿನಾ ಹಿಂಗೀಸ್ ಜೋಡಿ ಇದೀಗ ಕಳಪೆ...

ಕಳಪೆ ಪ್ರದರ್ಶನದಿಂದ ಬೇರ್ಪಡಲು ಮುಂದಾದ ಸ್ಟಾರ್ ಜೋಡಿ ಸಾನಿಯಾ-ಹಿಂಗೀಸ್
ಮಾರ್ಟಿನಾ ಹಿಂಗೀಸ್-ಸಾನಿಯಾ ಮಿರ್ಜಾ
Published On :

ನವದೆಹಲಿ: ಟೆನ್ನಿಸ್ ಜಗತ್ತಿನ ನಂಬರ್ ಒನ್ ಮಹಿಳಾ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ ಲೆಂಡ್ ನ ಮಾರ್ಟಿನಾ ಹಿಂಗೀಸ್ ಜೋಡಿ ಇದೀಗ ಕಳಪೆ ಪ್ರದರ್ಶನದಿಂದಾಗಿ ಬೇರ್ಪಡಲು ನಿರ್ಧರಿಸಿದ್ದಾರೆ.

2015 ಮತ್ತು 2016ರಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದ ಈ ಸ್ಟಾರ್ ಜೋಡಿ ಬೇರ್ಪಡಲು ನಿರ್ಧರಿಸಿರುವುದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಇನ್ನು ತಾವು ಬೇರ್ಪಡುತ್ತಿರುವ ಸಂಬಂಧ ಅವರು ಜಂಟಿ ಹೇಳಿಕೆ ನೀಡಿದ್ದಾರೆ.

3 ಗ್ರಾಂಡ್ ಸ್ಲಾಮ್ ಮತ್ತು 11 ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ನಾವಿಬ್ಬರೂ ಜತೆಯಾಗಿ ಗೆದ್ದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡಲು ನಿರ್ಧರಿಸಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.