ಜಾಕೋವಿಕ್, ಸೆರೆನಾಗೆ ಪ್ರತಿಷ್ಠಿತ ಲಾರಿಯಸ್ ವರ್ಷದ ಕ್ರೀಡಾಪಟು ಪ್ರಶಸ್ತಿ
ಟೆನ್ನಿಸ್ ಕ್ಷೇತ್ರದ ದಿಗ್ಗಜ ಆಟಗಾರರಾದ ನುವಾಕ್ ಜಾಕೋವಿಕ್ ಮತ್ತು ಸೆರೆನಾ ವಿಲಿಯಮ್ಸ್ ಗೆ ಪ್ರತಿಷ್ಛಿತ ಲಾರಿಯಸ್ ಪ್ರಶಸ್ತಿ ಒಲಿದುಬಂದಿದೆ..

ಬರ್ಲಿನ್: ಟೆನ್ನಿಸ್ ಕ್ಷೇತ್ರದ ದಿಗ್ಗಜ ಆಟಗಾರರಾದ ನುವಾಕ್ ಜಾಕೋವಿಕ್ ಮತ್ತು ಸೆರೆನಾ ವಿಲಿಯಮ್ಸ್ ಗೆ ಪ್ರತಿಷ್ಛಿತ ಲಾರಿಯಸ್ ಪ್ರಶಸ್ತಿ ಒಲಿದುಬಂದಿದೆ.
2015ನೇ ಸಾಲಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸರ್ಬಿಯಾದ 28 ವರ್ಷದ ಟೆನ್ನಿಲ್ ಆಟಗಾರ ನುವಾಕ್ ಜಾಕೋವಿಕ್ ಮತ್ತು ಸತತ 3 ಗ್ರಾಂಡ್ಸ್ ಸ್ಲಾಮ್ ಪ್ರಶಸ್ತಿ ವಿಜೇತರಾದ ಅಮೆರಿಕದ ಸೆರೆನಾ ವಿಲಿಯಮ್ಸ್ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಲಾರಿಯಸ್ ಪ್ರಶಸ್ತಿ ಪಡೆದಿದ್ದಾರೆ. ವರ್ಷದ ಅತ್ಯುತ್ತಮ ಕ್ರೀಡಾಪಟು ವಿಭಾಗದಲ್ಲಿ ಈ ಇಬ್ಬರೂ ಆಟಗಾರರಿಗೆ ಪ್ರಶಸ್ತಿ ಒಲಿದುಬಂದಿದೆ. ನೋವಾಕ್ ಜಾಕೋವಿಕ್ ಗೆ ಇದು ಸತತ 2 ನೇ ಬಾರಿಗೆ ಪ್ರಶಸ್ತಿ ಒಲಿದುಬಂದಿದ್ದು, ಒಟ್ಟಾರೆ ಮೂರು ಪ್ರಶಸ್ತಿಗೆ ಜಾಕೋವಿಕ್ ಪಾತ್ರರಾಗಿದ್ದಾರೆ. ಇನ್ನು ಸೆರೆನಾ ವಿಲಿಯಮ್ಸ್ ಗೂ ಇದು ಸತತ 2ನೇ ಪ್ರಶಸ್ತಿಯಾಗಿದೆ.
ಇನ್ನು ವರ್ಷದ ಅತ್ಯುತ್ತಮ ತಂಡ ಎಂಬ ಕೀರ್ತಿಗೆ ನ್ಯೂಜಿಲೆಂಡ್ ನ ರಾಷ್ಟ್ರೀಯ ರಗ್ಬಿ ತಂಡ ಭಾಜನವಾಗಿದ್ದು, 2015ರಲ್ಲಿ ನಡೆದ ರಗ್ಬಿ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಡಾನ್ ಕಾರ್ಟರ್ ನೇತೃತ್ವ ನ್ಯೂಜಿಲೆಂಡ್ ತಂಡ ಗೆದ್ದಿತ್ತು. ಇನ್ನು 2015ರ ಮಾಸ್ಚರ್ ಮತ್ತು ಯುಎಸ್ ಓಪನ್ ಚಾಂಪಿಯನ್ ಗಾಲ್ಫರ್ ಅಮೆರಿಕದ ಜೋರ್ಡಾನ್ ಸ್ಪೀತ್ ವರ್ಷದ ಜನಪ್ರಿಯ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾದರು. ಸಾಹಸ ಕ್ರೀಡಾಪಟು ವಿಭಾಗದಲ್ಲಿ ಜರ್ಮನ್ ನ ಟ್ರಯಾಥ್ಲೀಟ್ ಜಾನ್ ಫ್ರೋಡೆನ್ ಪ್ರಶಸ್ತಿಗಳಿಸಿದರೆ, ಬ್ರೆಜಿಲ್ ನ ಸ್ವಿಮ್ಮರ್ ಡೇನಿಯಲ್ ಡಯಾಸ್ ಅವರು ಅಸಮಾನ್ಯ ವಿಕಲಾಂಗ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


