ಕ್ರೀಡೆ

ಅಜರೆಂಕಾ ಮುಡಿಗೆ ಮಿಯಾಮಿ ಓಪನ್ ಗರಿ

2 ಬಾರಿ ಗ್ರಾಂಡ್ ಸ್ಲಾಮ್ ವಿಜೇತೆ ವಿಕ್ಟೋರಿಯಾ ಅಜರೆಂಕಾ ಮಿಯಾಮಿ ಓಪನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಜರೆಂಕಾ ಮುಡಿಗೆ ಮಿಯಾಮಿ ಓಪನ್ ಗರಿ
ಮಿಯಾಮಿ ಓಪನ್ ಪ್ರಶಸ್ತಿ ವಿಜೇತೆ ಅಜರಂಕಾ (ಚಿತ್ರಕೃಪೆ: ಡೈಲಿವರ್ಲ್ಡ್)
Published On :

ಫ್ಲೋರಿಡಾ: 2 ಬಾರಿ ಗ್ರಾಂಡ್ ಸ್ಲಾಮ್ ವಿಜೇತೆ ವಿಕ್ಟೋರಿಯಾ ಅಜರೆಂಕಾ ಮಿಯಾಮಿ ಓಪನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ಫ್ಲೋರಿಡಾದಲ್ಲಿ ನಡೆದ ಟೂರ್ನಿಯ ಫೈನಲ್ ನಲ್ಲಿ ರಷ್ಯಾದ ಸ್ವೆಟ್ಲಾನಾ ಕುಝೆಂಟ್ಸೋವಾರನ್ನು 6-3, 6-2 ಅಂತರದ ನೇರ ಸೆಟ್ ಗಳಿಂದ ಮಣಿಸಿದ ಅಜರೆಂಕಾ ಮಿಯಾಮಿ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 13ನೇ ಶ್ರೇಯಾಂಕದ ಅಂಜರಂಕಾಗೆ 15ನೇ ಶ್ರೇಯಾಂಕದ ಸ್ವೆಟ್ಲಾನಾ ಕುಝೆಂಟ್ಸೋವಾ ಮೊದಲ ಸೆಟ್ ನಲ್ಲಿ ಪ್ರಭಾವಿಯಾಗಿ ಪರಿಣಮಿಸಿದರೂ, ಬಳಿಕ ಚೇತರಿಸಿಕೊಂಡ ಅಜರೆಂಕಾ ಅವರ ಮೇಲೆ ಸವಾರಿ ಮಾಡಿದರು.

ಆರಂಭದಿಂದಲೂ ಅಕ್ರಮಣಕಾರಿ ಆಟದಲ್ಲಿ ತೊಡಗಿದ ಅಜರೆಂಕಾ ಅಂತಿಮವಾಗಿ ಸ್ವೆಟ್ಲಾನಾ ಕುಝೆಂಟ್ಸೋವಾ ವಿರುದ್ಧ 6-3, 6-2 ಅಂತರದ ಗೆಲುವು ಸಾಧಿಸಿದರು. ಆ ಮೂಲಕ 2016ನೇ ಸಾಲಿನ ಮಿಯಾಮಿ ಓಪನ್ ಟೂರ್ನಿಯ ಪ್ರಶಸ್ತಿಗೆ ಮುತ್ತಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.