ದಿ ರಾಕ್ ಕಣ್ಣೀರು ಹಾಕಿದ್ದು ಏಕೆ ಗೊತ್ತಾ?
ದಿ ರಾಕ್! ಡಬ್ಲ್ಯುಡಬ್ಲ್ಯುಇ ಫೈಟಿಂಗ್ನಲ್ಲಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಯಾವತ್ತು ಅತ್ತಿದ್ದಾನೆ ಹೇಳಿ? ಟ್ರಿಪಲ್ ಎಚ್, ಬಿಗ್ಶೋ, ಅಂಡರ್ಟೇಕರ್ ಎದುರಿನ ಭೀಕರ ಕುಸ್ತಿಯಲ್ಲೂ ಈತ ಅತ್ತವನಲ್ಲ...

Published On :
ದಿ ರಾಕ್! ಡಬ್ಲ್ಯುಡಬ್ಲ್ಯುಇ ಫೈಟಿಂಗ್ನಲ್ಲಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಯಾವತ್ತು ಅತ್ತಿದ್ದಾನೆ ಹೇಳಿ? ಟ್ರಿಪಲ್ ಎಚ್, ಬಿಗ್ಶೋ, ಅಂಡರ್ಟೇಕರ್ ಎದುರಿನ ಭೀಕರ ಕುಸ್ತಿಯಲ್ಲೂ ಈತ ಅತ್ತವನಲ್ಲ.
ಆದರೆ, ನಿನ್ನೆ ಈ ಕಲ್ಲುಬಂಡೆ ಕರಗಿತ್ತು. ಕರಗಿ ಕಣ್ಣೀರಾಗಿತ್ತು. ಕಾರಣ, ರಾಕ್ನ ಪ್ರೀತಿಯ ನಾಯಿಮರಿ `ಬ್ರುಟೂಸ್' ಇಹಲೋಕವನ್ನೇ ತ್ಯಜಿಸಿದ್ದು. ಲಾಸ್ ಏಂಜಲೀಸ್ನ ಈತನ ಮನೆಯ ಗಾರ್ಡನ್ನಲ್ಲಿ ಮಶ್ರೂಮ್ (ಅಣಬೆ) ಬೆಳೆಯಲಾಗಿತ್ತಂತೆ. ಈ ಮಶ್ರೂಮನ್ನು ನಾಯಿಮರಿ ತಿಂದ ಒಂದೇ ಗಂಟೆಯಲ್ಲಿ ಅಸುನೀಗಿದೆ. ಕೆಲವೇ ತಿಂಗಳ ಹಿಂದಷ್ಟೇ ರಾಕ್ ಈ ಮರಿಯನ್ನು ಖರೀದಿಸಿದ್ದರು.
ಒಂದೆರಡು ವಾರಗಳ ಕೆಳಗೆ ರಾಕ್ನ ಮನೆಯ ಸ್ವಿಮ್ಮಿಂಗ್ಪೂಲ್ಗೆ ಬ್ರೂಟಸ್ ಮತ್ತು ಇನ್ನೊಂದು ನಾಯಿಮರಿ ಹಾಬ್ಸ್ ಬಿದ್ದು, ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದವಂತೆ. ರಾಕ್ ಕೂಡಲೇ ಬಂದು ಜೀವ ಉಳಿಸಿದ್ದರು. 'ಪ್ರೀತಿಪಾತ್ರರನ್ನು ಇವತ್ತೇ ಪ್ರೀತಿಸಿ. ಯಾಕೆಂದರೆ ನಾಳೆ ಇರೋದಿಲ್ಲ' ಎಂದು ರಾಕ್ ದುಃಖದಲ್ಲಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


