ಬಾಸ್ಕೆಟ್‍ಬಾಲ್: ಜಪಾನ್‍ಗೆ ಮಣಿದ ಭಾರತ
ಆಕ್ರಮಣಕಾರಿ ಆಟವಾಡಿದ ಜಪಾನ್ ವಿರುದ್ಧ ಕಳಾಹೀನ ಪ್ರದರ್ಶನ ನೀಡಿದ ಭಾರತ ಬಾಸ್ಕೆಟ್‍ಬಾಲ್ ಏಷ್ಯಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ...

ಚಾಂಗ್‍ಶಾ(ಚೀನಾ): ಆಕ್ರಮಣಕಾರಿ ಆಟವಾಡಿದ ಜಪಾನ್ ವಿರುದ್ಧ ಕಳಾಹೀನ ಪ್ರದರ್ಶನ ನೀಡಿದ ಭಾರತ ಬಾಸ್ಕೆಟ್‍ಬಾಲ್ ಏಷ್ಯಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದೆ.
ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದ ಆರಂಭದಲ್ಲಿ ಉತ್ತಮವಾಗಿಯೇ ಕಾದಾಡಿದ ಭಾರತ, 11 ಪಾಯಿಂಟ್ಸ್‍ಗಳನ್ನು ತನ್ನದಾಗಿಸಿಕೊಂಡಿತು. ಅಂತೆಯೇ ಎರಡನೇ ಕ್ವಾರ್ಟರ್‍ನಲ್ಲಿಯೂ ಆಕರ್ಷಕ ಆಟವಾಡಿ 18-15ರಿಂದ ಮುನ್ನಡೆ ಸಾಧಿಸಿತು. ಆದರೆ ಒಡನೆಯೇ ಚುರುಕಿನ ಆಟವಾಡಿದ ಜಪಾನ್ ಎರಡನೇ ಅವಧಿಯ ಮೊದಲ ಏಳು ನಿಮಿಷಗಳಲ್ಲೇ 16-7ರ ಮುನ್ನಡೆಯೊಂದಿಗೆ ತಿರುಗೇಟು ನೀಡಿತು.
ಭಾರತದ ಪರ ವಿಶೇಶ್ ಭೃಗುವಂಶಿ 24 ಪಾಯಿಂಟ್ಸ್ ಪಡೆದರೆ, ಜಪಾನ್ ಪರ ಟಕಿಯುಚಿ ಜೊಜಿ 22 ಪಾಯಿಂಟ್ಸ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


