ಟಿ-20 ಸರಣಿಯಲ್ಲಿ ಆಡಲು ಸಚಿನ್, ಶೇನ್ ವಾರ್ನ್ ಗೆ ಐಸಿಸಿ ಗ್ರೀನ್ ಸಿಗ್ನಲ್
ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಅವರು ಟಿ-20 ಸಿರೀಸ್ ನ ಮೂರು ಪಂದ್ಯಗಳಲ್ಲಿ ಆಟವಾಡಲು ಐಸಿಸಿ ಅನುಮತಿ ನೀಡಿದೆ....

ನವದೆಹಲಿ: ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಅವರು ಅಮೆರಿಕಾದಲ್ಲಿ ನಡೆಯುವ ಟಿ-20 ಸಿರೀಸ್ ನ ಮೂರು ಪಂದ್ಯಗಳಲ್ಲಿ ಆಟವಾಡಲು ಐಸಿಸಿ ಅನುಮತಿ ನೀಡಿದೆ.
ನವೆಂಬರ್ ನಲ್ಲಿ ನಡೆಯುವ ಟಿ-20 ಸರಣಿಯಲ್ಲಿ ಸಚಿನ್ ಮತ್ತು ಶೇನ್ ವಾರ್ನ್ ಆಡಲು ಯಾವುದೇ ಸಮಸ್ಯೆಯಿಲ್ಲ ಎಂದಿರುವ ಐಸಿಸಿ ಇಬ್ಬರಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಐಸಿಸಿ ಅಮೆರಿಕ ಕ್ರಿಕೆಟ್ ಅಸೋಸಿಯೇಷನ್ ಗೆ ಆಡಳಿತ ಮಂಡಳಿ ಬದಲಾಯಿಸಿತ್ತು. ಇನ್ನು ಟಿ-2- ಯಿಂದ ಬರುವ ಲಾಭದಲ್ಲಿ ಐಸಿಸಿ ಅಮೆರಿಕಾದಲ್ಲಿ ಕ್ರೀಡಾ ಪ್ರಚಾರಕ್ಕೆ ಬಳಸಲಿದೆ. ರಾಹುಲ್ ಡ್ರಾವಿಡ್, ಗ್ಲೆನ್ ಮ್ಯಾಕ್ ಗ್ರೇತ್, ಜಾಕ್ ಕಾಲಿಸ್, ಆಡಮ್ ಗಿಲ್ ಕ್ರಿಸ್ಟ್. ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವಾಸಿಮ್ ಅಕ್ರಮ್ ಸೇರಿದಂತೆ ಒಟ್ಟು 26 ಮಂದಿ ಆಟಾಗರರು ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಎಲ್ಲಾ 26 ಆಟಗಾರರಿಗೆ ಉತ್ತಮ ಮಾರುಕಟ್ಟೆಯಿದೆ. ಆಡಗಾರರ ಪ್ರದರ್ಶನ ನೋಡಲು ಅಮೆರಿಕನ್ನರು ಇಷ್ಟ ಪಡುತ್ತಾರೆ. ಇದರಿಂದ ಅಮೆರಿಕಾದಲ್ಲಿ ಕ್ರೀಡೆಗಳು ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.ಮೂರು ಪಂದ್ಯಗಳು, ಚಿಕಾಗೋ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ನ ಕ್ರೀಡಾಂಗಣದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


