ಕ್ರೀಡೆ

ಪ್ರಶಸ್ತಿ ಗರಿಯಲ್ಲಿ ವಿದಾಯದ ಸಹಿ

ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿನ ಬೆನ್ನತ್ತಿ ಸುಮಾರು ಹನ್ನೆರಡು ವರ್ಷಗಳ ನಿರಂತರ ಪ್ರಯತ್ನದ ನಂತರ, ತಮ್ಮ ಚೊಚ್ಚಲ ಪ್ರತಿಷ್ಠಿತ ಟೂರ್ನಿಯ ಸಿಂಗಲ್ಸ್...

ಪ್ರಶಸ್ತಿ ಗರಿಯಲ್ಲಿ ವಿದಾಯದ ಸಹಿ
ಫ್ಲಾವಿಯಾ ಪೆನ್ನೆಟ್ಟಾ
Published On :
ನ್ಯೂಯಾರ್ಕ್: ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿನ ಬೆನ್ನತ್ತಿ ಸುಮಾರು ಹನ್ನೆರಡು ವರ್ಷಗಳ ನಿರಂತರ ಪ್ರಯತ್ನದ ನಂತರ, ತಮ್ಮ ಚೊಚ್ಚಲ ಪ್ರತಿಷ್ಠಿತ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿಯೊಂದಿಗೆ ಇಟಲಿಯ ಟೆನಿಸ್ ಆಟಗಾರ್ತಿ ಫ್ಲಾವಿಯಾ ಪೆನೆಟ್ಟಾ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 
ಭಾನುವಾರ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಫ್ಲಾವಿಯಾ ಪೆನೆಟ್ಟಾ, ತಮ್ಮ ದೇಶದ ಪ್ರತಿಸ್ಪರ್ಧಿ ರಾಬರ್ಟಾ ವಿನ್ಸಿ ವಿರುದ್ಧ 7-6 (7-4), 6-2 ನೇರ ಸೆಟ್‍ಗಳ ಜಯ ಸಂಪಾದಿಸಿದರು. ಆ ಮೂಲಕ ಟೂರ್ನಿಯ ಆರಂಭದಲ್ಲಿ ತವರಿನ ಅಂಗಣದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ ಎಂಬ ಕುತೂಹಲದಲ್ಲಿದ್ದ ಅಭಿಮಾನಿಗಳಿಗೆ ಸಂಪೂರ್ಣ ಭಿನ್ನವಾದ ಫತಾಂಶ ಸಿಕ್ಕಿದೆ. 
33 ವರ್ಷದ ಪೆನೆಟ್ಟಾ ಮೊದಲ ಬಾರಿಗೆ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಚೊಚ್ಚಲ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ್ತಿ ಎಂಬ ಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಪೆನೆಟ್ಟಾ 2011ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ತಮ್ಮ ಜತೆಗಾರ್ತಿ ಅರ್ಜೆಂಟೀನಾದ ಗಿಸೆಲಾ ಡುಲ್ಕೊ ಜತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.