ಕ್ರಿಕೆಟಿಗ ಅಭಿಮನ್ಯು ಜೊತೆ ರಾಧಿಕಾ ಶರತ್ ಕುಮಾರ್ ಪುತ್ರಿ ವಿವಾಹ
ಕರ್ನಾಟಕದ ವೇಗಿ, ಬೆಂಗಳೂರಿನ ಪೀಣ್ಯ ನಿವಾಸಿ, ಅಭಿಮನ್ಯು ಮಿಥುನ್ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ...

ಕರ್ನಾಟಕದ ವೇಗಿ, ಬೆಂಗಳೂರಿನ ಪೀಣ್ಯ ನಿವಾಸಿ, ಅಭಿಮನ್ಯು ಮಿಥುನ್ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ದಕ್ಷಿಣ ಭಾರತದ ನಟಿ ರಾಧಿಕಾ ಶರತ್ ಕುಮಾರ್ ಅವರ ಪುತ್ರಿ ಜೊತೆ ಮಿಥುನ್ ಅವರ ಮದುವೆ ನೆರವೇರಲಿದೆ.ಈ ಶುಭ ಸಮಾಚಾರವನ್ನು ರಾಧಿಕಾ ಶರತ್ ಕುಮಾರ್ ಅವರ ಪತಿ ಶರತ್ ಕುಮಾರ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ರಾಧಿಕಾ ಅವರ ಪುತ್ರಿ ರಾಯನೆ ಹಾಗೂ ಮಿಥುನ್ ಅವರ ನಿಶ್ಚಿತಾರ್ಥ ಸಮಾರಂಭ ಸೆಪ್ಟೆಂಬರ್ 23ರಂದು ಚೆನ್ನೈನಲ್ಲಿ ನಡೆಯಲಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಕ್ರಿಕೆಟ್ ಪಂದ್ಯವೊಂದರ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗ ಮದುವೆ ಹಸೆಮಣೆ ತನಕ ತಲುಪಿದೆ. ಗಾಸಿಪ್ ಅಂಕಣಗಳಲ್ಲೂ ಇಬ್ಬರ ಬಗ್ಗೆ ಆಗಾಗ ಸುದ್ದಿ ಹಬ್ಬುತ್ತಿತ್ತು.
ರಾಧಿಕಾ ಅವರ ಮೊದಲ ಪತಿ ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರಿಗೆ ನಟ ಶರತ್ ಕುಮಾರ್ ಅವರು ಮಲ ತಂದೆಯಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


