ಕ್ರೀಡೆ

ಮೆಸ್ಸಿಯ ಆಟ ವಿಡಿಯೋ ಗೇಮ್ ಅಂತೆ!

ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯ ಆಟವೇ ಮಸ್ತು. ಅರ್ಜೆಂಟಿನಾದ ಚುರುಕು ಹುಡುಗ ಈಗ ಬೆಲಾರಸ್‍ನ ಟೆನಿಸ್ ಬೆಡಗಿ ವಿಕ್ಟೋರಿಯಾ ಅಝರೆಂಕಾಳ ಮನಸ್ಸು ಕದ್ದಿದ್ದಾನಾ? ಗೊತ್ತಿಲ್ಲ...

ಮೆಸ್ಸಿಯ ಆಟ ವಿಡಿಯೋ ಗೇಮ್ ಅಂತೆ!
ವಿಕ್ಟೋರಿಯಾ ಅಝರೆಂಕಾ
Published On :

ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯ ಆಟವೇ ಮಸ್ತು. ಅರ್ಜೆಂಟಿನಾದ ಚುರುಕು ಹುಡುಗ ಈಗ ಬೆಲಾರಸ್‍ನ ಟೆನಿಸ್ ಬೆಡಗಿ ವಿಕ್ಟೋರಿಯಾ ಅಝರೆಂಕಾಳ ಮನಸ್ಸು ಕದ್ದಿದ್ದಾನಾ? ಗೊತ್ತಿಲ್ಲ.

ಆದರೆ, ವಿಕ್ಟೋರಿಯಾ ಹೀಗಂದಿದ್ದಾಳೆ ಮೆಸ್ಸಿಯ ಆಟ ನೋಡ್ತಿದ್ರೆ ವಿಡಿಯೋ ಗೇಮ್ ನೋಡಿದ ಹಾಗಾಗುತ್ತೆ'! ಹ್ಯೂಸ್ಟನ್‍ನಲ್ಲಿ ಬೊಲಿವಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಜೆಂಟಿನಾ 7-0 ಅಂತರದಿಂದ ಗೆಲವು ದಾಖಲಿಸಿತು. ಇದರಲ್ಲಿ ಮೆಸ್ಸಿಯ 2 ಗೋಲುಗಳು ಗಮನ ಸೆಳೆಯುವಂತಿದ್ದವು. 'ನಾನು ಫ್ರೀ ಇದ್ದಾಗ ಮೆಸ್ಸಿಯ ಮ್ಯಾಚ್ ನೋಡ್ತಿರ್ತೀನಿ.

ಆದರೆ, ಮೊನ್ನೆ ಏನೋ ಕೆಲಸ ಇದ್ದ ಕಾರಣ ಈ ಪಂದ್ಯವನ್ನು ನೋಡಲಾಗಲಿಲ್ಲ. ಅವನದ್ದು ಅನೂಹ್ಯ ಆಟ. ಬಾರ್ಸಿಲೋನಾದ ಸ್ಟೇಡಿಯಮ್ಮಿನಲ್ಲಿ ಈತನ ಆಟ ಕಂಡಿದ್ದೆ.
ಫುಟ್ಬಾಲಿಗರು ಕಾಲಲ್ಲಿ ಆಡ್ತಾರೆ. ನಮ್ಮ ಆಟದಲ್ಲಿ ಕೈಗಳೇ ಕಾಲುಗಳು. ಅವನಂತೆ ನಾನೂ ವೇಗಿ ಆಗ್ತೀನಿ' ಎಂದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.