ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್
ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

ಬ್ಯಾಂಕಾಕ್: ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಇದರೊಂದಿಗೆ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಬುಧವಾರ ನಡೆದ ಪುರುಷರ 91+ ಕೆ.ಜಿ ವಿಭಾಗದ ಕ್ವಾರ್ಟರ್ಫೆೈನಲ್ ಪಂದ್ಯದಲ್ಲಿ ಸತೀಶ್ ಕುಮಾರ್, ತಮ್ಮ ಪ್ರತಿಸ್ಪರ್ಧಿ ತಜಕಿಸ್ತಾನದ ಸಿಯೋವುಶ್ ಜುಖುರೋವ್ ಅವರನ್ನು ಮಣಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದರು. ಸೆಮಿಫೆೈನಲ್ ತಲುಪುವುದರೊಂದಿಗೆ ಅವರು ಪದಕವನ್ನೂ ಖಚಿತಪಡಿಸಿಕೊಂಡಿದ್ದಾರೆ. ಇನ್ನು 52 ಕೆ.ಜಿ ವಿಭಾಗದಲ್ಲಿ ಮದನ್ ಲಾಲ್ ಹಾಗೂ 81 ಕೆ.ಜಿ ವಿಭಾಗದಲ್ಲಿ ಕುಲ್ದೀಪ್ ಸಿಂಗ್ ತಮ್ಮ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದರು.
ಭಾರತೀಯ ಆಟಗಾರನ ಆಕ್ರಮಣಕಾರಿ ಆಟದವನ್ನು ಎದುರಿಸಲಾಗದೇ ಸಿಯೋವುಶ್ ನಿಗದಿಗಿಂತ ಹೆಚ್ಚು ಬಾಗುತ್ತಿದ್ದರಿಂದ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ ಸತೀಶ್ ಕುಮಾರ್ ಅವರನ್ನು ತಾಂತ್ರಿಕ ಆಧಾರದ ಮೇಲೆ ಜಯಶಾಲಿ ಎಂದು ಘೋಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


