2015ರ ಐಪಿಎಲ್ ನಿಂದ ಹರಿದುಬಂದದ್ದು ರು. 11.5 ಬಿಲಿಯನ್ ಜಿಡಿಪಿ
2015ರ ಐಪಿಎಲ್ ನಿಂದ ಒಟ್ಟು ರು. 11.5 ಬಿಲಿಯನ್ ಆರ್ಥಿಕ ವೃದ್ಧಿ ದರ (ಜಿಡಿಪಿ) ಹರಿದುಬಂದಿದೆ ಎಂದು ಬಿಸಿಸಿಐ ಶುಕ್ರವಾರ...

Published On :
ನವದೆಹಲಿ: 2015ರ ಐಪಿಎಲ್ ನಿಂದ ಒಟ್ಟು ರು. 11.5 ಬಿಲಿಯನ್ ಆರ್ಥಿಕ ವೃದ್ಧಿ ದರ (ಜಿಡಿಪಿ) ಹರಿದುಬಂದಿದೆ ಎಂದು ಬಿಸಿಸಿಐ ಶುಕ್ರವಾರ ಹೇಳಿದೆ.
ಐಪಿಎಲ್ ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವಂತೆ ಬಿಸಿಸಿಐ ಕೆಪಿಎಂಜಿ ಸ್ಪೋರ್ಟ್ಸ್ ಸಲಹಾ ಸಂಘವನ್ನು ನೇಮಕ ಮಾಡಿತ್ತು. ಈ ಸಲಹಾ ಸಂಘವೀಗ ಜಿಡಿಪಿಯ ಮಾಹಿತಿಯನ್ನು ಬಹಿರಂಗ ಪಡಿಸಿದೆ.
2015ರ ಐಪಿಎಲ್ ನಲ್ಲಿ 8 ಫ್ರಾಂಚೈಸಿಗಳಿದ್ದು, 44 ದಿನಗಳ ಕಾಲ 60 ಮ್ಯಾಚ್ಗಳನ್ನಾಡಿದ್ದವು. ಭಾರತಾದ್ಯಂತ 12 ನಗರಗಳಲ್ಲಿ 13 ಸ್ಥಳಗಳಲ್ಲಿ ಐಪಿಎಲ್ ಪಂದ್ಯ ನಡೆದಿತ್ತು.
193 ಕ್ರಿಕೆಟಿಗರು ಇದರಲ್ಲಿ ಭಾಗವಹಿಸಿದ್ದು, 1.71 ಮಿಲಿಯನ್ ಪ್ರೇಕ್ಷಕರು ಆಟವನ್ನು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
2015ರ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ರು. 26.5 ಬಿಲಿಯನ್ ಆರ್ಥಿಕ ವಹಿವಾಟುಗಳು ನಡೆದಿವೆ. ಐಪಿಎಲ್ ಪಂದ್ಯಗಳಿಗೆ ಆತಿಥೇಯ ವಹಿಸುವ ಮೂಲಕ ಹೆಚ್ಚಿನ ಆರ್ಥಿಕ ಆದಾಯವನ್ನೂ ದೇಶ ಗಳಿಸುತ್ತದೆ ಎಂದು ಬಿಸಿಸಿಐ ಹೇಳಿದೆ.
2015ರ ಋತುವಿನಲ್ಲಿ, ಶೇ. 20 ರಷ್ಟ್ರು ಕ್ರೀಡಾಭಿಮಾನಿಗಳು ಆತಿಥೇಯ ನಗರಗಳ ಜತೆಗೆ ಇನ್ನಿತರ ನಗರಗಳಿಗೂ ಭೇಟಿ ನೀಡಿದ್ದಾರೆ. ಹೀಗೆ ಭೇಟಿ ನೀಡಿದವರಲ್ಲಿ ಬ್ರಿಟನ್, ಆಸ್ಟ್ರೇಲಿಯಾ ಮತ್ತು ದಕ್ಷಿಣಾಫ್ರಿಕಾದ ಕ್ರೀಡಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಸಮೀಕ್ಷೆಯ ಪ್ರಕಾರ ಹಲವಾರು ರೀತಿಯಲ್ಲಿ ಐಪಿಎಲ್ ದೇಶದ ಆರ್ಥಿಕತೆಯನ್ನು ವೃದ್ಧಿ ಮಾಡಿದೆ. ಇಷ್ಟೇ ಅಲ್ಲದೆ ಪ್ರವಾಸೋದ್ಯಮವನ್ನೂ ಇದು ಪೋಷಿಸಿದೆ. ಐಪಿಎಲ್ ನಿಂದಾಗಿ ರು. 11.5 ಬಿಲಿಯನ್ ಆರ್ಥಿಕ ಅಭಿವೃದ್ಧಿ ದರ ಹರಿದು ಬಂದಿದೆ. ಇನ್ನು ಮುಂದೆಯೂ ಐಪಿಎಲ್ ಆಟಗಳನ್ನು ಪ್ರೋತ್ಸಾಹಿಸುವುದಾದರೆ ಭಾರತದ ಆರ್ಥಿಕತೆ ಇನ್ನೂ ಹೆಚ್ಚಳವಾಗಲಿದೆ ಎಂದು ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


