ಕ್ರೀಡೆ

ಐಪಿಎಲ್: ಹೊಸ ತಂಡಗಳ ಪ್ರವೇಶಕ್ಕೆ ಟೆಂಡರ್

ಅಮಾನತುಗೊಂಡಿರುವ ಚೈನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಪ್ರತಿಷ್ಠಿತ ಐಪಿಎಲ್ ಲೀಗ್ ನಿಂದ ದೂರ ಉಳಿಸಲು ಬಿಸಿಸಿಐ ನಿರ್ಧರಿಸಿದ್ದು...

ಐಪಿಎಲ್: ಹೊಸ ತಂಡಗಳ ಪ್ರವೇಶಕ್ಕೆ ಟೆಂಡರ್
ಬಿಸಿಸಿಐ
Published On :
ಮುಂಬೈ: ಅಮಾನತುಗೊಂಡಿರುವ ಚೈನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಪ್ರತಿಷ್ಠಿತ ಐಪಿಎಲ್ ಲೀಗ್ ನಿಂದ ದೂರ ಉಳಿಸಲು ಬಿಸಿಸಿಐ ನಿರ್ಧರಿಸಿದ್ದು, ಹೊಸ ತಂಡಗಳ ಪ್ರವೇಶಕ್ಕೆ ಟೆಂಡರ್ ನೀಡಲಾಗುತ್ತಿದೆ. 
ಮುಂಬೈನಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ನೂತನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ನಡೆದ ಸಭೆ ವೇಳೆ ಕೆಲವು ಸದಸ್ಯರು ಅಮಾನತುಗೊಂಡಿರುವ ತಂಡಗಳನ್ನು ಲೀಗ್ ನಲ್ಲಿ ಉಳಿಸಿಕೊಳ್ಳಲು ತೋರಿದ್ದರು. ಆದರೆ ಮಂಡಳಿ ಸುಪ್ರಿಂಕೋರ್ಟ್ ನೇಮಿಸಿದ ನ್ಯಾ ಲೋಧಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸಿಎಸ್ ಕೆ ಹಾಗೂ ಆರ್ ಆರ್ ತಂಡಗಳ ಅಮಾನತನ್ನು ಮುಂದುವರಿಸಲು ತೀರ್ಮಾನಿಸಿದೆ. ಉಭಯ ತಂಡಗಳು 2018ರ ಲೀಗ್ ನಲ್ಲಿ ಆಡಲು ಅರ್ಹತೆ ಪಡೆಯಲಿವೆ.
2018ರ ಲೀಗ್ ನಲ್ಲಿ ಅಮಾನತುಗೊಂಡಿರುವ ಎರಡು ತಂಡಗಳು ಮರಳಿದರೆ, ಲೀಗ್ ನಲ್ಲಿ ಒಟ್ಟು 10 ತಂಡಗಳು ಇರಲಿವೆಯಾ ಎಂಬ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.