ಸಮಬಲದಲ್ಲಿ ವಿದರ್ಭ-ಕರ್ನಾಟಕ
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ವಿದರ್ಭ ನಡುವಣ ರಣಜಿ ಪಂದ್ಯದಲ್ಲಿ...

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ವಿದರ್ಭ ನಡುವಣ ರಣಜಿ ಪಂದ್ಯದಲ್ಲಿ ಸಮಬಲ ಕಂಡಿದೆ.ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 6 ವಿಕೆಟ್ ಕಳೆದುಕೊಂಡು 298 ರನ್ ಮಾಡಿದೆ. ಗಳಿಸಿದ ಮೊತ್ತ ಉತ್ತಮವೇ ಆದರೂ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿರುವುದರಿಂದ ಪರಿಸ್ಥಿತಿ ಸೂಕ್ಷ್ಮವಾಗಿದೆ.
ರಾಜ್ಯದ ಪರ ರಾಬಿನ್ ಉತ್ತಪ್ಪ, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಅತ್ಯುತ್ತಮವಾಗಿ ಆಡಿದರು. ಈ ಮೂವರ ಆಟದಿಂದ ರಾಜ್ಯ ಗೌರವಾರ್ಹ ಮೊತ್ತ ದಾಖಲಿಸಿತು. ಉತ್ತಪ್ಪ 134 ಎಸೆತಗಳಿಂದ 59 ಬಾರಿಸಿ 3ನೇಯವರಾಗಿ ಔಟಾದರು. ಅವರ ಆಟದಿಂದ ರಾಜ್ಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಆದರೆ ಇದಕ್ಕೂ ಮುನ್ನವೇ ಭಾರತ ಟೆಸ್ಟ್ ತಂಡದ ಆರಂಭಿಕರಾಗಿರುವ ಕೆ.ಎಲ್.ರಾಹುಲ್ ಅಲ್ಪ ಮೊತ್ತಕ್ಕೆ ಔಟಾದರು. ನಿರೀಕ್ಷೆ ಮೂಡಿಸಿದ್ದ ರವಿ ಸಮರ್ಥ್ ಕೂಡ ಬೇಗ ವಿಕೆಟ್ ಒಪ್ಪಿಸಿದರು. ಇದರಿಂದ ತಂಡ ಆಘಾತಕ್ಕೊಳಗಾಗಿತ್ತು. ಇಂತಹ ಪರಿಸ್ಥಿತಿಯನ್ನು ನಿಭಾಯಿಸಿದ್ದು ಮನೀಶ್ ಪಾಂಡೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


