ಕ್ರೀಡೆ

ಕಟಕ್‌ನಲ್ಲಿ ಕಮರಿದ ಕನಸು

ಶಾಂತಿ ಪ್ರಿಯರಾದ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರ ಹೆಸರಿನ ಸರಣಿಯಲ್ಲಿ ಕ್ರೀಡಾ ಸ್ಫೂರ್ತಿ ಮರೆತ ಭಾರತದ ಕೆಲ ಅಭಿಮಾನಿಗಳ ಕೃತ್ಯ...

ಕಟಕ್‌ನಲ್ಲಿ ಕಮರಿದ ಕನಸು
Published On :

ನಾಗ್ಪುರ: ಶಾಂತಿ ಪ್ರಿಯರಾದ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರ ಹೆಸರಿನ ಸರಣಿಯಲ್ಲಿ ಕ್ರೀಡಾ ಸ್ಫೂರ್ತಿ ಮರೆತ ಭಾರತದ ಕೆಲ ಅಭಿಮಾನಿಗಳ ಕೃತ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಈ ಘಟನೆ ದೇಶವೇ ತಲೆ ತಗ್ಗಿಸುವಂತೆ ಮಾಡಿರುವುದು ದುರಾದುಷ್ಟಕರ.

ಸೋಮವಾರ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯ, ಭಾರತ ಕ್ರಿಕೆಟ್ ನಾಚಿಕೆ ಪಡುವಂತಹ ಸಂಗತಿಗೆ ಸಾಕ್ಷಿಯಾಯಿತು. ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡ 17.2 ಓವರ್‌ಗಳಲ್ಲಿ 92ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಹರಿಣಗಳು 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 96ರನ್ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ಪ್ರವಾಸಿಗರು ಟಿ20 ಸರಣಿಯನ್ನು 2-0ಯಿಂದ ಬಾಚಿಕೊಂಡರು.

ಮಾನ ತೆಗೆದ ಕಿಡಿಗೇಡಿಗಳು: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ವೈಫಲ್ಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿ ಪಂದ್ಯ ಪೂರ್ಣವಾಗಿ ನಡೆಯದೆ ಕೆಲಹೊತ್ತು ಅಮಾನತುಗೊಂಡ ಪ್ರಸಂಗ ನಡೆಯಿತು.

ಭಾರತದ ಬ್ಯಾಟಿಂಗ್ ವೈಖರಿಯಿಂದ ಕ್ರುದ್ಧಗೊಂಡ ಅಭಿಮಾನಿಗಳು ನೀರಿನ ಬಾಟೆಲ್‌ಗಳನ್ನು ಮೈದಾನದ್ದೆ ಎಸೆದು ಅಡ್ಡಿಪಡಿಸಿದರು. ಇದರಿಂದ ಗಲಿಬಿಲಿ ಉಂಟಾಗಿ ಆಟಗಾರರು ಮೈದಾನ ತೊರೆಯುವಂತಾಯಿತು. ಈ ಸಂದರ್ಭದಲ್ಲಿ ಪ್ರವಾಸಿ ತಂಡ ಗೆಲುವಿಗೆ 42 ಎಸೆತಗಳಲ್ಲಿ 23ರನ್ ಮಾಡಬೇಕಿತ್ತು.

ಈ ವೇಳೆ ಡಕ್ಲರ್ಥ್ ಲೂಯಿಸ್ ನಿಯಮದ ಲೆಕ್ಕಾಚಾರ ಹಾಕಲಾಗಿದ್ದು, ಪ್ರವಾಸಿಗರು 17ರನ್‌ಗಳ ಮುನ್ನಡೆಯಲ್ಲಿದ್ದರು. ಈ ಘಟನೆಯಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಆಟ ಮುಂದುವರೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.