ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯ ವೇಳೆ ಪ್ರೇಕ್ಷಕರ ದಾಂಧಲೆ, ಕ್ರಿಕೆಟಿಗರ ಪ್ರತಿಕ್ರಿಯೆ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ವೈಫಲ್ಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿ....

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯ ವೇಳೆ ಪ್ರೇಕ್ಷಕರ ದಾಂಧಲೆ, ಕ್ರಿಕೆಟಿಗರ ಪ್ರತಿಕ್ರಿಯೆ
ಕ್ರಿಕೆಟಿಗರು
Published On :
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ವೈಫಲ್ಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿ ಅಭಿಮಾನಿಗಳು ನೀರಿನ ಬಾಟೆಲ್ ಗಳನ್ನು ಮೈದಾನಕ್ಕೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಈ ಸಂಬಂಧ ಕ್ರಿಕೆಟಿಗರು ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.
ಕ್ರೀಡಾಂಗಣದಲ್ಲಿ ಅಭಿಮಾನಿಗಳ ವರ್ತನೆ ಬೇಸರ ತಂದಿದೆ. ಜಂಟಲ್ ಮ್ಯಾನ್ ಕ್ರಿಕೆಟ್ ನಲ್ಲಿ ಈ ರೀತಿ ನಡೆಯುವುದು ಒಳ್ಳೆಯದಲ್ಲ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದೊಂದು ಅವಮಾನದ ಸಂಗತಿ. ಪಂದ್ಯದಲ್ಲಿ ನಾವು ಗೆದ್ದರೆ ಎಲ್ಲಾ ಚನ್ನಾಗಿರುತ್ತೇ. ಅದೇ ಸೋತರೇ ಅಭಿಮಾನಿಗಳು ನೀವು ರೀತಿ ನಡೆದುಕೊಳ್ಳುವುದೇ? ಕ್ರೀಡೆ ಮತ್ತು ಆಟಗಾರರನ್ನು ಪ್ರೇಕ್ಷಕರು ಗೌರವಿಸಬೇಕಿದೆ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ಆಟಗಾರರ ವೈಫಲ್ಯ ಅಭಿಮಾನಿಗಳಲ್ಲಿ ಅಸಮಾದಾನಕ್ಕೆ ಕಾರಣವಾಗಿದ್ದರೆ, ಅಭಿಮಾನಿಗಳು ನಡೆದುಕೊಂಡ ರೀತಿ ಹೆಚ್ಚು ನಿರಾಶೆ ಮೂಡಿಸಿದೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಕಟಕ್ ಮೈದಾನದಲ್ಲಿ ಅಪಮಾನಕರ ದೃಶ್ಯಗಳು ಕಂಡುಬಂದಿದ್ದು, ಮೈದಾನಕ್ಕೆ ನೀರಿನ ಬಾಟಲ್ ಗಳನ್ನು ಎಸೆಯುವ ಹಕ್ಕಿರಲಿಲ್ಲ. ಆಟಗಾರರ ಪ್ರದರ್ಶನಕ್ಕಿಂತ ಅಭಿಮಾನಿಗಳ ವರ್ತನೆ ಕೆಟ್ಟದಾಗಿತ್ತು ಎಂದು ಹರ್ಷಾ ಬೋಗಲೆ ಟ್ವೀಟ್ ಮಾಡಿದ್ದಾರೆ.
ಪಂದ್ಯದ ವೇಳೆ ಅಭಿಮಾನಿಗಳು ತೋರಿದ ವರ್ತನೆ ನಿರಾಶೆ ಮೂಡಿಸಿದೆ. ಕ್ರೀಡಾ ಮೈದಾನದಲ್ಲಿ ಇಂತಾ ಘಟನೆಗಳು ನಡೆಯಬಾರದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ಕಟಕ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ಕೇಲವ 92 ರನ್ ಗಳಿಗೆ ಆಲೌಟ್ ಆಗಿತ್ತು. ಇದರಿಂದ ಕ್ರುದ್ಧಗೊಂಡ ಅಭಿಮಾನಿಗಳು ನೀರಿನ ಬಾಟೆಲ್ ಗಳ್ನು ಮೈದಾನಕ್ಕೆ ಎಸೆದು ಪಂದ್ಯಕ್ಕೆ ಅಡ್ಡಿಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.