ಕ್ರೀಡೆ

ಅಂಪೈರ್ ಗಳ ನಿರ್ಧಾರ ಆಟದ ದಿಕ್ಕನ್ನೆ ಬದಲಿಸುತ್ತೆ: ಧೋನಿ

ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳಿಂದ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಟೀಂ ಇಂಡಿಯಾ ನಾಯಕ ...

ಅಂಪೈರ್ ಗಳ ನಿರ್ಧಾರ ಆಟದ ದಿಕ್ಕನ್ನೆ ಬದಲಿಸುತ್ತೆ: ಧೋನಿ
ಮಹೇಂದ್ರ ಸಿಂಗ್ ಧೋನಿ
Published On :

ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳಿಂದ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಟೀಂ ಇಂಡಿಯಾ ನಾಯಕ ಧೋನಿ ಅಂಪೈರ್ ಗಳ ವಿರುದ್ಧ ಕಿಡಿ ಕಾರಿದ್ದಾರೆ.

ಪಂದ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ, ಅಂಪೈರ್ ಗಳ ಕೆಲವೊಂದು ನಿರ್ಧಾರಗಳು ನಮ್ಮ ಪರವಾಗಿ ಬಾರದ ಕಾರಣ ನಮಗೆ ಒತ್ತಡ ಹೆಚ್ಚಾಗಿ ಜಯದ ಅಂಚಿಗೆ ಬಂದರೂ ಸಹ ಗೆಲುವು ನಮ್ಮದಾಗಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನಾವು ನೀಡಿದ ಗುರಿ ಸವಾಲಿನದ್ದಾಗಿತ್ತು. ಮಧ್ಯದ ಓವರ್ ತುಂಬಾ ನಿರ್ಣಾಯಕವಾಗಿತ್ತು. ಆದರೆ ಈ ಸಮಯದಲ್ಲಿ ಬಂದ ನಿರ್ಧಾರಗಳಿಂದಾಗಿ ಬೌಲರ್ ಗಳ ಮೇಲೆ ಒತ್ತಡ ಹೆಚ್ಚಾಯಿತಲ್ಲದೇ ಅದರಲ್ಲಿಯೂ 20 ನೇ ಓವರ್ ಎಸೆಯುವ ಸಂದರ್ಭದಲ್ಲಿ ನಮ್ಮ ಒತ್ತಡ ತುಂಬಾ ಹೆಚ್ಚಿತ್ತು ಎಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.

17ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಎಸೆದ ಚೆಂಡು ಡ್ಯುಮಿನಿ ಎಲ್‍ಬಿಡಬ್ಲ್ಯೂ ಆಗಿ ಔಟಾಗುವ ಸಾಧ್ಯತೆಯಿತ್ತು. ಆದರೆ ಅಂಪೈರ್ ಭಾರತದ ಎಲ್‍ಬಿಡಬ್ಲ್ಯೂ ಮನವಿಯನ್ನು ತಿರಸ್ಕರಿಸಿದ್ದರು. ಹಾಗಾಗಿ ಡ್ಯುಮಿನಿ ಅವರ ಅಜೇಯ ಆಟದಿಂದಾಗಿ ಇನ್ನೂ 2 ಬಾಲ್ ಇರುವಂತೆಯೇ ದಕ್ಷಿಣ ಆಫಿಕಾ ಜಯ ಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.