ಭಾರತ -ಪಾಕ್ ಕ್ರಿಕೆಟ್ ಸರಣಿ: ಮೋದಿಗೆ ಅಕ್ರಮ್ ಮನವಿ
ಭಾರತ ಹಾಗೂ ಪಾಕಿಸ್ತಾನ ನಡುವಣದ ಕ್ರಿಕೆಟ್ ಸರಣಿ ಸಂಬಂಧ ಸೂಕ್ತ ನಿರ್ಧಾರ ತಳೆಯುವಂತೆ ಭಾರತದ ಪ್ರಧಾನಿ...

ಕರಾಚಿ: ಭಾರತ ಹಾಗೂ ಪಾಕಿಸ್ತಾನ ನಡುವಣದ ಕ್ರಿಕೆಟ್ ಸರಣಿ ಸಂಬಂಧ ಸೂಕ್ತ ನಿರ್ಧಾರ ತಳೆಯುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಂ ಅಕ್ರಮ್ ಮನವಿ ಮಾಡಿದ್ದಾರೆ.
2007ರ ನಂತರದ ಮೊಟ್ಟಮೊದಲ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಇರುವ ಬಿಕ್ಕಟ್ಟನ್ನು ತೆರವುಗೊಳಿಸಬೇಕೆಂದು ಅಕ್ರಮ್ ತಿಳಿಸಿದ್ದಾರೆ.
`ಪಾಕಿಸ್ತಾನ- ಭಾರತ ಕ್ರಿಕೆಟ್ ಸರಣಿ ನಡೆಸಲು ತಮಗೆ ಯಾವುದೇ ಅಭ್ಯಂತರ ವಿಲ್ಲ ಎಂಬುದನ್ನು ಸಚಿವ ಸಂಪುಟಕ್ಕೆ ಮೋದಿ ತಿಳಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಹೀಗಾಗಿ ಡಿಸೆಂಬರ್‍ನಲ್ಲಿ ನಡೆಯಬೇಕಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಹಸಿರು ನಿಶಾನೆ ತೋರಲು ಮೋದಿ ಮನಸ್ಸು ಮಾಡಬೇಕು' ಎಂದು ಅಕ್ರಮ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


