ಬ್ರಿಟಿಷ್ ಏರ್‌ವೇಸ್ ಬಗ್ಗೆ ಸಚಿನ್ ಬೇಸರ, ಇನ್ನೆಂದಿಗೂ ಆ ವಿಮಾನ ಹತ್ತಲ್ಲ ಎಂದ ಕ್ರಿಕೆಟ್ ದೇವರು
ಬ್ರಿಟಿಷ್ ಏರ್‌ವೇಸ್ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು, ಇನ್ನೆಂದಿಗೂ ಆ ವಿಮಾನ ಹತ್ತುವುದಿಲ್ಲ...

ಲಂಡನ್: ಪೂರ್ಣ ಹೆಸರು ಕೇಳುವ ಮೂಲಕ ತಮ್ಮನ್ನು ಅವಮಾನ ಮಾಡಿದ ಬ್ರಿಟಿಷ್ ಏರ್‌ವೇಸ್ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಬ್ರಿಟಿಷ್ ಏರ್‌ವೇಸ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಚಿನ್, ಸೀಟು ಖಾಲಿಯಿದ್ದರೂ ನನ್ನ ಕುಟುಂಬಕ್ಕೆ ಟಿಕೆಟ್ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಏರ್‌ವೇಸ್ ಸಿಬ್ಬಂದಿ ನಮ್ಮ ಲಗೇಜ್‌ಅನ್ನು ಬೇರೆಯ ಸ್ಥಳಕ್ಕೆ ತಲುಪಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ನೆಂದಿಗೂ ಆ ವಿಮಾನ ಹತ್ತುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳ ನಡುವೆ ಸಂಬಂಧ ವೃದ್ದಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿ ಇರುವಾಗಲೇ ಸಚಿನ್ ಅವರ ಪೂರ್ಣ ಹೆಸರು ಕೇಳುವ ಮೂಲಕ ಬ್ರಿಟಿಷ್ ಏರ್‌ವೇಸ್ ಕ್ರಿಕೆಟ್ ದೇವರಿಗೆ ಅವಮಾನ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


