ಕ್ರೀಡೆ

ಕ್ರಿಕೆಟಿಗ ಯುವಿ-ನಟಿ ಹೇಜಲ್ ಕೀಚ್ ರಹಸ್ಯ ವಿವಾಹ ನಿಶ್ಚಿತಾರ್ಥ..?

ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಬಾಲಿವುಡ್ ನಟಿ ಹೇಜಲ್ ಕೀಚ್ ನಡುವಿನ ಡೇಟಿಂಗ್ ಕುರಿತಂತೆ ಹಲವು ಊಹಾಪೋಹಗಳ ನಡುವೆಯೇ ವಿದೇಶದಲ್ಲಿ ಇವರಿಬ್ಬರ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮಾಡಿಮುಗಿಸಲಾಗಿದೆ ಎಂದು ಹೇಳಲಾಗುತ್ತಿದೆ...

ಕ್ರಿಕೆಟಿಗ ಯುವಿ-ನಟಿ ಹೇಜಲ್ ಕೀಚ್ ರಹಸ್ಯ ವಿವಾಹ ನಿಶ್ಚಿತಾರ್ಥ..?
ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ನಟಿ ಹೇಜಲ್ ಕೀಚ್ ಅವರ ಕುಟುಂಬ (ಸಂಗ್ರಹ ಚಿತ್ರ)
Published On :

ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಬಾಲಿವುಡ್ ನಟಿ ಹೇಜಲ್ ಕೀಚ್ ನಡುವಿನ ಡೇಟಿಂಗ್ ಕುರಿತಂತೆ ಹಲವು ಊಹಾಪೋಹಗಳ ನಡುವೆಯೇ ವಿದೇಶದಲ್ಲಿ ಇವರಿಬ್ಬರ  ನಿಶ್ಚಿತಾರ್ಥವನ್ನು ರಹಸ್ಯವಾಗಿ ಮಾಡಿಮುಗಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ವಿವಾಹದ ಬಳಿಕ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಎಲ್ಲರ ಕೇಂದ್ರ ಬಿಂದುವಾಗಿದ್ದು, ತಮ್ಮ  ಮದುವೆ ಕುರಿತಂತೆ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ಮೂಲಗಳ ಪ್ರಕಾರ ಯುವರಾಜ್ ಸಿಂಗ್ ಮತ್ತು ನಟಿ ಹೇಜಲ್ ಕೀಚ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ವಿವಾಹ ನಿಶ್ಚಿತಾರ್ಥ  ನೆರವೇರಿಸಿಕೊಂಡಿದ್ದು, ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ತಮ್ಮ ವಿವಾಹ ಕುರಿತಂತೆ ಮಾಧ್ಯಮಗಳ ವರದಿ ಕುರಿತಂತೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಯುವಿ, ಮಾಧ್ಯಮಗಳು ನನ್ನ ಮದುವೆಯ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಿಬಿಟ್ಟಿವೆ. ದಿನಾಂಕವನ್ನೂ ನೀವೇ ಗೊತ್ತು ಮಾಡಿ. ಮದುವೆಗೆ ಸಿದ್ಧನಾಗಲು ನನಗೆ ನೆರವಾಗುತ್ತದೆ ಎಂದು ಹೇಳುವ ಮೂಲಕ ವಿಹಾಹ ಕುರಿತ ಊಹಾಪೋಹಗಳಿಗೆ ತೆರೆಎಳೆಯಲು ಈ ಹಿಂದೆ ಪ್ರಯತ್ನಿಸಿದ್ದರು.

ಆದರೆ ಯುವಿ ಮತ್ತು ಹೇಜಲ್ ಕೀಚ್ ನಡುವಿನ ವಿವಾಹದ ಸುದ್ದಿ ಕುರಿತಂತೆ ಈ ಹಿಂದೆಯೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಸುಳಿವು ಬಿಟ್ಟುಕೊಟ್ಟಿದ್ದರು. ಟ್ವಿಟ್ಟರ್ ಚಾಟಿಂಗ್ ವೇಳೆ "ಭಜ್ಜಿ ಈಗ ನನ್ನ  ಸರದಿ ಬಳಿಕ ಯುವಿಯದ್ದು" ಎಂದು ಹೇಳುವ ಮೂಲಕ ಯುವರಾಜ್ ಸಿಂಗ್ ಮದುವೆ ಕುರಿತ ರಹಸ್ಯವನ್ನು ಬಿಚ್ಚಿಟ್ಟಿದ್ದರು.

ಒಟ್ಟಾರೆ ಭಜ್ಜಿ-ಬಸ್ರಾ ವಿವಾಹದ ಬಳಿಕ ಎಲ್ಲ ಕ್ರೀಡಾ ಪ್ರೇಮಿಗಳ ದೃಷ್ಟಿ ಯುವಿ ಮೇಲೆ ಬಿದ್ದಿದ್ದು, ಯುವಿ ವಿವಾಹ ಸಾಕಷ್ಟು ನಿರೀಕ್ಷೆ ಗರಿಗೆದರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.