ಹೊಸ ತಂಡ ಖರೀದಿ ಮೂಲಕ ಐಪಿಎಲ್ ಗೆ ಧೋನಿ ಎಂಟ್ರಿ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಿಂದ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸದೊಂದು

Published On :
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಿಂದ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸದೊಂದು ತಂಡ ಖರೀದಿಸುವ ಮೂಲಕ ಐಪಿಎಲ್ ಗೆ ಕಾಲಿಡಲಿದ್ದಾರೆ.
ಧೋನಿ ಐಪಿಎಲ್ ತಂಡವೊಂದನ್ನು ಖರೀದಿಸಲು ಉತ್ಸುಕರಾಗಿದ್ದು, ಕೋಲ್ಕತ್ತಾ ಮೂಲದ ಉದ್ಯಮಿ ಸಂಜೀವ್ ಗೋಯೆಂಕಾ ಜೊತೆಗೂಡಿ ತಂಡದ ಫ್ರಾಂಚೈಸಿ ಪಡೆಯಲು ಧೋನಿ ಮುಂದಾಗಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಐಪಿಎಲ್ ಬೆಟ್ಟಿಂಗ್ ಹಗರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಸ್ಟೀಸ್ ಲೋಧಾ ವರದಿ ಆಧರಿಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನ ನಿಷೇಧಿಸಲಾಗಿತ್ತು.
ಇದೀಗ, ಮತ್ತೆರಡು ಹೊಸ ತಂಡಗಳನ್ನ ಸೇರ್ಪಡೆಗೊಳಿಸಲು ಬಿಸಿಸಿಐ ಮುಂದಾಗಿದ್ದು, ನವೆಂಬರ್ 15ರಿಂದ ಪ್ರಕ್ರಿಯೆಗಳು ಆರಂಭವಾಗಲಿವೆ. 9 ಹೊಸ ಸ್ಥಳಗಳನ್ನು ಫೈನಲ್ ಮಾಡಿದ್ದು, ಡಿಸೆಂಬರ್ 8ಕ್ಕಿ ಬಿಡ್ಡಿಂಗ್ ನಡೆಯಲಿದೆ. ತಂಡದ ಮೂಲ ಬೆಲೆ 40 ಕೋಟಿ ರುಪಾಯಿ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹೇಂದ್ರ ಸಿಂಗ್ ಧೋನಿMahendra Singh DhoniIndian Premier Leagueತಂಡಇಂಡಿಯನ್ ಪ್ರಿಮಿಯರ್ ಲೀಗ್Sanjeev GoenkaTeamsಸಂಜೀವ್ ಗೋಯೆಂಕಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


