ಪ್ರಶಸ್ತಿ ಸುತ್ತಿಗೆ ವೀನಸ್ ವಿಲಿಯಮ್ಸ್
ಅಗ್ರಶ್ರೇಯಾಂಕಿತ ಟೆನಿಸ್ ಆಟಗಾರ್ತಿ, ಅಮೆರಿಕದ ವೀನಸ್ ವಿಲಿಯಮ್ಸ್ ಡಬ್ಲ್ಯೂಟಿಎ ಎಲೈಟ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ...

Published On :
ಜುಹಾಯ್(ಚೀನಾ): ಅಗ್ರಶ್ರೇಯಾಂಕಿತ ಟೆನಿಸ್ ಆಟಗಾರ್ತಿ, ಅಮೆರಿಕದ ವೀನಸ್ ವಿಲಿಯಮ್ಸ್ ಡಬ್ಲ್ಯೂಟಿಎ ಎಲೈಟ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಉಪಾಂತ್ಯದ ಪಂದ್ಯದಲ್ಲಿ, ಟೂರ್ನಿಯ ನಾಲ್ಕನೇ ಶ್ರೇಯಾಂಕಿತೆ, ಇಟಲಿಯ ರಾಬರ್ಟಾ ವಿನ್ಸಿ ವಿರುದ್ಧ ಸೆಣಸಿದ ಅವರು, 6-2, 6-2 ನೇರ ಸೆಟ್‍ಗಳಲ್ಲಿ ಜಯಗಳಿಸಿ, ಪ್ರಶಸ್ತಿ ಸುತ್ತಿಗೆ ಕಾಲಿಟ್ಟರು. ಕೇವಲ 65 ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಿಂದಲೂ ಉತ್ತಮ ಫಾರ್ಮ್ ಪ್ರದರ್ಶಿಸಿದ ವೀನಸ್, ಬಹುಬೇಗನೇ ಇಟಲಿ ಆಟಗಾರ್ತಿಯ ವಿರುದ್ಧ ಪ್ರಭುತ್ವ ಸಾಧಿಸಿದರು. ರಾಬೆರ್ಟಾ ಅವರಿಂದ ಅಲ್ಲಲ್ಲಿ ಪ್ರತಿರೋಧ ಎದುರಿಸಿದರೂ, ಜಯ ಗಳಿಸುವಲ್ಲಿ ವೀನಸ್ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tennisಟೆನ್ನಿಸ್venus williamsವೀನಸ್ ವಿಲಿಯಮ್ಸ್Roberta Vinciರಾಬರ್ಟಾ ವಿನ್ಸಿWTA Elite Trophy finalಡಬ್ಲ್ಯೂಟಿಎ ಎಲೈಟ್ ಟ್ರೋಫಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


