ಆಲ್ ಸ್ಟಾರ್ಸ್ ಲೀಗ್ ನಲ್ಲಿ ಪರಸ್ಪರ ಕಿಚಾಯಿಸಿದ ಸಚಿನ್, ದಾದಾ
ಆಲ್ ಸ್ಟಾರ್ಸ್ ಲೀಗ್ ಪ್ರಾರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಭಾರತದ ಇಬ್ಬರು ಮಾಜಿ ಆಟಗಾರರಾದ ಸಚಿನ್ ಮತ್ತು ಗಂಗೂಲಿ ನಡುವೆ ಹಾಸ್ಯ ಪ್ರಹಸನ ಶುರುವಾಗಿದೆ.

ನವದೆಹಲಿ: ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡೆಯ ಜನಪ್ರಿಯತೆ ಹೆಚಿಸಲು ನಡೆಯುತ್ತಿರುವ ಆಲ್ ಸ್ಟಾರ್ಸ್ ಲೀಗ್ ಪ್ರಾರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಭಾರತದ ಇಬ್ಬರು ಮಾಜಿ ಆಟಗಾರರಾದ ಸಚಿನ್ ಮತ್ತು ಗಂಗೂಲಿ ನಡುವೆ ಹಾಸ್ಯ ಪ್ರಹಸನ ಶುರುವಾಗಿದೆ.
ಸಚಿನ್ ಬ್ಲಾಸ್ಟರ್ಸ್ ತಂಡದ ಪರ ಆಡಬೇಕಾದರೆ, ಇನ್ನಿಂಗ್ಸ್ ಓಪನಿಂಗ್ ಗೆ ಅವಕಾಶ ಕಲ್ಪಿಸಬೇಕು, ಇಲ್ಲದೇ ಹೋದರೆ ತಾನು ನೇರವಾಗಿ ಕೋಲ್ಕತಾ ಪ್ಲೈಟ್ ಹತ್ತಬೇಕಾಗುತ್ತದೆ ಎಂದು ಸಚಿನ್ ಗೆ ಗಂಗೂಲಿ ಧಮಕಿ ಹಾಕಿದ್ದಾರೆ. ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿನ್, ದಾದಾ ಅರ್ಜಿ ಪರಿಶೀಲನೆಯಲ್ಲಿದೆ ಎಂದು ಕಿಚಾಯಿಸಿದ್ದಾರೆ.
ಅಂದಹಾಗೆ ನವೆಂಬರ್ 7 ರಂದು ವಾರ್ನ್ ವಾರಿಯರ್ಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಮಾತನಾಡಿರುವ ಗಂಗೂಲಿ ನಾನು ಸಚಿನ್ ತಂಡದಲ್ಲಿ ಆಡಬೇಕಿದ್ದರೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಕೋಲ್ಕತಾಗೆ ಮರಳುವುದಾಗಿ ತಿಳಿಸಿದ್ದೇನೆ ಅದಕ್ಕೆ ಸಚಿನ್ ಅದು ಸಾಧ್ಯವಿಲ್ಲ. ಈ ಕುರಿತ ನಿರ್ಧಾರ ನಿಧಾನವಾಗಿ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದು ಇದೊಂದು ತಮಾಷೆಯಷ್ಟೇ ಎಂದು ಹೇಳಿದ್ದಾರೆ.
ದಾದಾ ನಿಮ್ಮ ಇನಿಂಗ್ಸ್ ಆರಂಭಿಸುವ ಅರ್ಜಿ ಪರಿಶೀಲನೆಯಲ್ಲಿದ್ದು ನಿಮ್ಮ ಬ್ಯಾಟ್ ನಿಂದ ಅತ್ಯುತ್ತಮ ಆಫ್ ಡ್ರೈವ್ ಹೊರಬರುವ ನಿರೀಕ್ಷೆ ಇದೆ ಎಂದು ಸಚಿನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


