ದಕ್ಷಿಣ ಆಫ್ರಿಕಾಗೆ ಅಶ್ವಿನ್ ಸವಾಲು : ಡುಪ್ಲೆಸಿಸ್
ಮುಂಬರುವ ಭಾರತ ವಿರುದ್ಧದ ಟೆಸ್ಟ ಸರಣಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದ.ಆಫ್ರಿಕಾಗೆ ಪ್ರಬಲ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ...

ಮೊಹಾಲಿ: ಮುಂಬರುವ ಭಾರತ ವಿರುದ್ಧದ ಟೆಸ್ಟ ಸರಣಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದ.ಆಫ್ರಿಕಾಗೆ ಪ್ರಬಲ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಹಿನ್ನೆಲೆಯಲ್ಲಿ ಇಲ್ಲಿನ ಐಎಸ್ ಬಿಂದ್ರಾ ಪಿಸಿಎ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಭ್ಯಾಸ ನಡೆಸಿದ ಬಳಿಕ ಮಾತನಾಡಿದ ಡು'ಪ್ಲೆಸಿಸ್, ಪಿಚ್ ಆತಿಥೇಯರ ಪರವಾಗಿದೆ ಎಂದು ನಿರೀಕ್ಷಿಸಿದ್ದೀರ ಎಂಬ ಪ್ರಶ್ನೆಗೆ ''ಪಂದ್ಯದ ಮೊದಲ ದಿನ ಚೆಂಡು ಯಾವ ರೀತಿ ಸ್ಪಿನ್ ಆಗಲಿದೆ ಎಂದು ನಿರೀಕ್ಷಿಸಿದ್ದೇವೆ. ನಂತರ ಆದರ ಬಗ್ಗೆ ಯೋಜನೆ ರೂಪಿಸಲಿದ್ದೇವೆ. ನನ್ನ ಪ್ರಕಾರ ಸದ್ಯ ಭಾರತ ಸಾಕಷ್ಟು ಆಕ್ರಮಣಕಾರಿಯಾಗಿದೆ. ಪಂದ್ಯದ ಮೂರು, ನಾಲ್ಕು ಮತ್ತು ಐದನೇ ಸಾಮಾನ್ಯವಾಗಿ ಸ್ಪಿನ್‌ಗೆ ಹೆಚ್ಚು ನೆರವಾಗಲಿದೆ. ಆದರೆ ಮೊದಲ ದಿನ ಈ ಅವರು ಹೇಗೆ ಆರಂಭಿಸಲಿದ್ದಾರೆ ಎಂಬುದನ್ನು ಕಾದು ನೋಡಲಿದ್ದೇವೆ,'' ಎಂದು ಹೇಳಿದ್ದಾರೆ.
ಅಶ್ವಿನ್ ಅತ್ಯುತ್ತಮ ಸ್ಪಿನ್ನರ್ ಆದರೆ ನನ್ನ ಪ್ರಕಾರ 20ಟಿಯಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಆದರೆ ಇದು ಟೆಸ್ಟ್ ಕ್ರಿಕೆಟ್. ಆದಾಗ್ಯೂ ಅವರು ಹೆಚ್ಚು ಅಪಾಯಕಾರಿಯಾಗಬಹುದು, ಅಶ್ವಿನ್ ಪ್ರಮುಖ ಅಪಾಯಕಾರಿ ಬೌಲರ್. ಆದರೆ ನಮ್ಮ ಯೋಜನೆಗಳು ನಿಜವಾಗಿಯೂ ಅದ್ಬುತವಾಗಿವೆ,''ಎಂದು ಫಾಫ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


