3ನೇ ಸುತ್ತಿಗೆ ಸಾನಿಯಾ
ಭಾರತದ ಹಿರಿಯ ಟೆನಿಸ್ ತಾರೆ ಹಾಗೂ ಮೂಗುತಿ ಸುಂದರಿ ಎಂದೇ ಖ್ಯಾತರಾಗಿರುವ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ಲೆಂಡ್‍ನಹಿರಿಯ ಆಟಗಾರ್ತಿ...

ಮಿಶ್ರ ಡಬಲ್ಸ್‍ನಲ್ಲಿ ಪೇಸ್‍ಗೆ ಜಯ, ಬೋಪಣ್ಣಗೆ ಸೋಲು
ಪ್ಯಾರಿಸ್ : ಭಾರತದ ಹಿರಿಯ ಟೆನಿಸ್ ತಾರೆ ಹಾಗೂ ಮೂಗುತಿ ಸುಂದರಿ ಎಂದೇ ಖ್ಯಾತರಾಗಿರುವ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ಲೆಂಡ್‍ನಹಿರಿಯ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜೋಡಿ, ಫ್ರೆಂಚ್ ಓಪನ್‍ನ ಮಹಿಳೆಯರಡಬಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೆ ಕಾಲಿಟ್ಟಿದೆ.
ಶುಕ್ರವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಈ ಜೋಡಿ, ಫ್ರಾನ್ಸ್ ನ ಸ್ಟೆಫಾನಿ ಫೋರೆಜ್ ಹಾಗೂ ಆ್ಯಮಾಡಿನ್ ಹೆಸ್ಸಿ ಜೋಡಿ ವಿರುದ್ಧ 6-3, 6-4 ಸೆಟ್‍ಗಳ ಅಂತರದಲ್ಲಿ
ಜಯ ಸಾಧಿಸಿತು.
ಪೇಸ್‍ಗೆ ಜಯ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಪುರುಷರ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಗೆಲವು ದಾಖಲಿಸಿದ್ದಾರೆ. ಮಿಶ್ರ ಡಬಲ್ಸ್‍ನಲ್ಲಿ ಜತೆಗಾರ್ತಿ ಮಾರ್ಟಿನಾ ಹಿಂಗೀಸ್ ಜತೆ ಮೊದಲ ಸುತ್ತಿನಲ್ಲಿ ಗೆಲವು ದಾಖಲಿಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಡೇನಿಯಲ್ ನೆಸ್ಟರ್ ಜತೆಗೆ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಡಬಲ್ಸ್
ವಿಭಾಗದ ಪಂದ್ಯದಲ್ಲಿ ಪೇಸ್ ಜೋಡಿಯು, ತಮ್ಮ ಎದುರಾಳಿ ಜರ್ಮನಿಯ ಆ್ಯಂಡ್ರೆ
ಬೆಂಜಮನ್ ಮತ್ತು ಆಸ್ಟ್ರೇಲಿಯಾದ ಜೂಲಿಯನ್ ನೊವ್ಲೆ ವಿರುದ್ಧ 7-6 (7-3),
6-2 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ ನಾಲ್ಕನೇ
ಸುತ್ತಿಗೆ ಪ್ರವೇಶಿಸಿದ್ದಾರೆ.
ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಲಿಯಾಂಡರ್ ಮತ್ತು ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗೀಸ್ ಜೋಡಿಯು, ತಮ್ಮ ಎದುರಾಳಿ ರಷ್ಯಾದ ಅಲ್ಲಾ ಕುಡ್ರಿಯವೆಟ್ಸೆವಾ ಮತ್ತು ಜುವಾನ್ ಸೆಬಾಸ್ಟಿಯನ್ ಕೆಡಲ್ ಜೋಡಿಯನ್ನು ಮಣಿ ಸುವ ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದೆ. ಮತ್ತೊಂದು ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕಜಕಿಸ್ತಾನದ ಯರಸ್ಲೊವ ಶ್ವೆಡೊವಾ ಜೋಡಿಯು ಆಘಾತ ಅನುಭವಿಸಿತು. ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿಯಾ ಹಾರ್ಡೆಕಾ ಮತ್ತು ಪೋಲೆಂಡ್‍ನ ಮರ್ಸಿನ್ ಮ್ಯಾಟ್ಕೊವ್‍ಸ್ಕಿ ವಿರುದಟಛಿ 6-7 (5-7), 6-0, 3-10 ಸೆಟ್‍ಗಳ ಅಂತರದಲ್ಲಿ ಸೋಲ ನುಭವಿಸಿತು. ಪಂದ್ಯದ ಆರಂಭದಲ್ಲಿ ಉಭಯ ಜೋಡಿ ಗಳು ಪರಸ್ಪರ ಜಿದ್ದಾಜಿದ್ದಿನ ಹೋರಾಟ ನಡೆಸಿದವು ಪರಿಣಾಮ ಮೊದಲ ಸೆಟ್‍ನಲ್ಲಿ 6-7 (5-7) ಅಂತರದ ಹಿನ್ನಡೆ ಅನುಭವಿಸಿದವು. ಆನಂತರ ಎರಡನೇ ಸೆಟ್ ನಲ್ಲಿ ಹೋರಾಟ ನಡೆಸುವ ಮೂಲಕ 6-0 ಅಂತರ ಕಾಯ್ದುಕೊಂಡು ಪಂದ್ಯದಲ್ಲಿ ಸಮಬಲ ಸಾಧಿಸಿತು. ಮೂರನೇ ಸೆಟ್‍ನಲ್ಲಿ ಮತ್ತೆ ಲಯ ಕಳೆದುಕೊಂಡ ಪರಿಣಾಮ 3-10ರ ಹಿನ್ನಡೆಯೊಂದಿಗೆ ಪರಾಭವಗೊಂಡಿತು.
ಇವಾನೊವಿಚ್‍ಗೆ ಜಯ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಚಾಂಪಿಯನ್ ಅನಾ ಇವಾನೊವಿಚ್ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನಪಂದ್ಯದಲ್ಲಿ ತಮ್ಮ ಎದುರಾಳಿ ಕ್ರೋವೇಶಿಯಾದ ಡೊನಾ ವಿಕಿಕ್ ವಿರುದ್ಧ 6-0, 6-3 ಸೆಟ್‍ಗಳ ಅಂತರದಲ್ಲಿ ಗೆಲವು ಸಂಪಾದಿಸಿದರು. ಪಂದ್ಯದ ಸಂಪೂರ್ಣ ಅವಧಿಯಲ್ಲಿಪ್ರಾಬಲ್ಯ ಮೆರೆದ ಅನಾ ಇವಾನೊವಿಚ್ ಸುಲಭವಾಗಿ ಡೊನಾ ವಿರುದ್ಧ ಮೇಲುಗೈ ಸಾಧಿಸಿದರು. ಈ ಮೂಲಕ ನಾಲ್ಕನೇ ಸುತ್ತಿಗೆ ಲಗ್ಗೆ ಹಾಕಿದ್ದಾರೆ.
4ನೇ ಸುತ್ತಿಗೆ ಫೆಡರರ್
ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸ್ವಿಜರ್ಲೆಂಡ್‍ನ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಗೆಲವು ದಾಖಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ತಮ್ಮ ಎದುರಾಳಿ ಬೊಸ್ನಿಯಾ ಮತ್ತು
ಹರ್ಜೆಂಗೊವಿನಾದ ಡ್ಯಾಮಿರ್ ಜುಂಹುರ್ ವಿರುದ್ಧ 6-4, 6-3, 6-2 ಸೆಟ್‍ಗಳಿಂದ ಗೆಲವು ದಾಖಲಿಸಿದರು. ಜಪಾನ್‍ನ ಆಟಗಾರ ಕಾಯ್ ನಿಶಿಕೋರಿ, ತಮ್ಮ ಎದುರಾಳಿ ಜರ್ಮನಿಯ ಬೆಂಜಮಿನ್ ಬೆಕರ್ ಪಂದ್ಯ ದಿಂದ ಹೊರ ನಡೆದ ಹಿನ್ನೆಲೆಯಲ್ಲಿ ವಾಕ್ ಓವರ್ ಮೂಲಕ ನಾಲ್ಕನೇ ಸುತ್ತಿಗೆ ಪ್ರವೇಶಿಸಿ
ದ್ದಾರೆ. ಸ್ಟಾನಿಸ್ಲಾಸ್ ವಾವ್ರಿಂಕಾ ತಮ್ಮ ಎದುರಾಳಿ ಸ್ಟೀವ್ ಜಾನ್ಸನ್ ವಿರುದ್ಧ 6-4, 6-3, 6-2 ಸೆಟ್‍ಗಳಿಂದ ಜಯಿಸಿದರು.
ಶರಪೋವಾಗೆ ಜಯ
ರಷ್ಯಾದ ಮಾರಿಯಾ ಶರಪೋವಾ ಅವರು, ಫ್ರೆಂಚ್ ಓಪನ್‍ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 4ನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟೋಸರ್ ವಿರುದ್ಧ 6-3, 6-4 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.
ಥಾಮಸ್‍ಗೆ ಗೆಲವು ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ಅವರೂ,ಫ್ರೆಂಚ್ ಓಪನ್‍ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತಿಗೆ ಕಾಲಿಟ್ಟಿದ್ದಾರೆ. ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಅವರು, ಫ್ರಾನ್ಸ್ ನ ಬೆನೊಯಿಟ್ ಪೈರೆ ವಿರುದ್ಧ 6-1, 6-7 (5-7), 6-3, 6-4 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


