21 ನಿಮಿಷಕ್ಕೆ ಅಂತ್ಯವಾದ ರೊಮೆಯೊ ಬ್ರೆಜಿಲ್ ಕನಸು
ಬ್ರೆಜಿಲ್‍ನ ಲೀಗ್‍ನಲ್ಲಿ ಆಡುವ ಅವಕಾಶ ಪಡೆದಿದ್ದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರೊಮೆಯೊ ಫರ್ನಾಂಡೀಸ್...

ನವದೆಹಲಿ: ಬ್ರೆಜಿಲ್‍ನ ಲೀಗ್‍ನಲ್ಲಿ ಆಡುವ ಅವಕಾಶ ಪಡೆದಿದ್ದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರೊಮೆಯೊ ಫರ್ನಾಂಡೀಸ್ ಅವರ ಕನಸು, 21 ನಿಮಿಷಗಳ ಕಾಲ ಮೈದಾನದಲ್ಲಿ ಆಡುವ ಮೂಲಕ ಅಂತ್ಯವಾಗಿದೆ.
ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ಜತೆಗಿನ ತರಬೇತಿ ಒಪ್ಪಂದದ ಭಾಗವಾಗಿ ಬ್ರೆಜಿಲ್‍ನ ಫುಟ್ಬಾಲ್ ಕ್ಲಬ್ ಅಟ್ಲೆಟಿಕೊ ಪಾರ ನ್ಯಾನ್ಸೆ, ಎಫ್ ಸಿ ಗೋವಾ ತಂಡದ 22 ವರ್ಷದ ರೊಮೆಯೊ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಬುಧವಾರ ನಡೆದ ಪಂದ್ಯದಲ್ಲಿ 21 ನಿಮಿಷಗಳ ಕಾಲ ಮೈದಾನದಲ್ಲಿ ಸಬ್ ಸ್ಟಿಟ್ಯೂಟ್ ಆಗಿ ಕಣಕ್ಕಿಳಿದಿದ್ದ ರೊಮೆಯೊ, ಕ್ಲಬ್ ಪರ ತಮ್ಮ ಪಯಣವನ್ನು ಮುಕ್ತಾಯಗೊಳಿಸಿದ್ದಾರೆ.
ಅಟ್ಲೆಟಿಕೊ ಪಾರನ್ಯಾನ್ಸೆ, 6 ತಿಂಗಳ ಅವಧಿಗೆ ರೊಮೆಯೊ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ಜೂನ್ ಗೆ ಅಂತ್ಯಗೊಳ್ಳಲಿತ್ತು. ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಎಫ್ ಸಿ ಗೋವಾದಿಂದ ಬಿಡುಗಡೆ ಪಡೆದು ರೊಮೆಯೊ ಬ್ರೆಜಿಲ್‍ಗೆ ಪ್ರಯಾಣ ಬೆಳೆಸಿದ್ದರು. ಆದರೆ ಈ ಅವಧಿಯಲ್ಲಿ ಆತ ಆಡಿದ್ದು ಕೇವಲ 21 ನಿಮಿಷ ಮಾತ್ರ. ಈ ಒಪ್ಪಂದವನ್ನು ಡಿಸೆಂಬರ್ ತಿಂಗಳವರೆಗೂ ಮುಂದುವರಿಸ ಬಹುದಾಗಿತ್ತಾದರೂ ರೊಮೆಯೊ ತವರಿಗೆ ಆಗಮಿಸಲು ನಿರ್ಧರಿಸಿದ್ದಾರೆ ಎಂದು ರೊಮೆಯೊ ಮ್ಯಾನೆಜರ್ ತಿಳಿಸಿದ್ದಾರೆ.
ಈ ನಿರ್ಧಾರ ರೊಮೆಯೊ ಅವರದ್ದಾಗಿದೆ. ಈ ಅವಧಿಯಲ್ಲಿ ಅವರು ಒಂದು ಪಂದ್ಯದ ಅರ್ಧ ಅವಧಿಯನ್ನು ಆಡಲು ಸಾಧ್ಯವಾಗಿಲ್ಲ. ಬೆಂಚು ಕಾದದ್ದೇ ಹೆಚ್ಚಾಗಿತ್ತು. ಈಗ ಅವರು ಭಾರತಕ್ಕೆ ಆಗಮಿಸಲಿದ್ದು, ರಾಷ್ಟ್ರೀಯ ತಂಡವನ್ನು ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾಗಿ ಫಸ್ಟ್ ಪೋಸ್ಟ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


