ಕ್ರೀಡೆ

ಜೂನ್‍ನಲ್ಲಿ ಭಾರತ ಕ್ರಿಕೆಟ್ ತಂಡದಿಂದ ಬಾಂಗ್ಲಾ ಪ್ರವಾಸ

ಭಾರತ ತಂಡದ ಆಟಗಾರರು ಜೂನ್ ತಿಂಗಳು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ..

ಜೂನ್‍ನಲ್ಲಿ ಭಾರತ ಕ್ರಿಕೆಟ್ ತಂಡದಿಂದ ಬಾಂಗ್ಲಾ ಪ್ರವಾಸ
ಭಾರತ ಕ್ರಿಕೆಟ್ ತಂಡ
Published On :

ನವದೆಹಲಿ: ಭಾರತ ತಂಡದ ಆಟಗಾರರು ಜೂನ್ ತಿಂಗಳು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 10ರಿಂದ 14ರ ವರೆಗೆ ಫತುಲ್ಹಾದಲ್ಲಿ ನಡೆಯಲಿದೆ. ಉಳಿದಂತೆ, ಮೀರ್‍ಪುರನಲ್ಲಿಯೇ ಜೂ. 18, 21 ಮತ್ತು 24ರಂದು ಕ್ರಮವಾಗಿ ಮೂರು ಏಕದಿನ ಪಂದ್ಯಗಳು ಜರುಗಲಿವೆ. ಪ್ರಸ್ತುತ ಬಾಂಗ್ಲಾದೇಶ ಆಟಗಾರರು ಪಾಕಿಸ್ತಾನದ ವಿರುದ್ಧ ತವರಿನಲ್ಲಿಯೇ ಸರಣಿ ಆಡುತ್ತಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಬಾಂಗ್ಲಾ ಪಡೆ ಟೆಸ್ಟ್ ಸರಣಿಯಲ್ಲೂ ಅದ್ಭುತವಾಗಿ ಆಡಿ ಡ್ರಾ ಮಾಡಿಕೊಂಡಿತ್ತು.

ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 9ನೇ ಸ್ಥಾನದಲ್ಲಿದೆ. ಆದರೆ, ವಿಶ್ವಕಪ್ ಅಲ್ಲದೆ, ಪ್ರಸ್ತುತ ತವರಿನಲ್ಲಿ ಪಾಕಿಸ್ತಾನ ವಿರುದ್ಧವೂ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅದರ ತವರಿನಲ್ಲಿಯೇ ಆಡಬೇಕಾಗಿರುವುದರಿಂದ ಭಾರತದ ಆಟಗಾರರಿಗೆ ಈ ಪ್ರವಾಸದಲ್ಲಿ ಕಠಿಣ ಸವಾಲುಗಳು ಎದುರಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.