ಗೆಲುವಿನ ಕಾತುರದಲ್ಲಿ ಸರ್ದಾರ್ ಪಡೆ
ವಿಶ್ವ ಹಾಕಿ ರ್ಯಾಂಕಿಂಗ್ ನಲ್ಲಿ ತನಗಿಂತಲೂ ಕಿರಿಯ ಶ್ರೇಯಾಂಕ ಹೊಂದಿರುವ ಜಪಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 1-1ರ ಸಮಬಲ...

ಭುವನೇಶ್ವರ: ವಿಶ್ವ ಹಾಕಿ ರ್ಯಾಂಕಿಂಗ್ ನಲ್ಲಿ ತನಗಿಂತಲೂ ಕಿರಿಯ ಶ್ರೇಯಾಂಕ ಹೊಂದಿರುವ ಜಪಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 1-1ರ ಸಮಬಲ ಸಾಧಿಸಿದ್ದ ಭಾರತ, ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡುವ ಮೂಲಕ ಅರ್ಹ ಗೆಲುವು ಕಾಣುವ ಭರವಸೆ ಹೊಂದಿದೆ.
ಒಟ್ಟು ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಭಾರತ ಜಯ ಕಂಡು, ಎದುರಾಳಿಗಿಂತ ಮುನ್ನಡೆ ಸಾಧಿಸುವ ತವಕದಲ್ಲಿದೆ. ಭಾನುವಾರ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಇತ್ತಂಡಗಳು ರೋಮಾಂಚಕ ಆಟ ಪ್ರದರ್ಶಿಸಿದ್ದವು. ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ, ವಿಶ್ವ ರ್ಯಾಂಕಿಂಗ್‍ನಲ್ಲಿ 9ನೇ ಸ್ಥಾನ ಪಡೆದಿರುವ ಭಾರತ, ಪಂದ್ಯವನ್ನು ಉತ್ತಮ ರೀತಿಯಲ್ಲಿ ಆರಂಭಿಸಿದರೂ, 16ನೇ ಶ್ರೆಯಾಂಕ ಹೊಂದಿರುವ ಜಪಾನ್ ವಿರುದ್ಧ ಗೋಲು ಗಳಿಸಲು ಹರಸಾಹಸ ಮಾಡಬೇಕಾಯಿತು.
ಈ ತುರುಸಿನ ಸ್ಪರ್ಧೆಯಲ್ಲಿ ಮೊದಲು ಯಶಸ್ಸು ಕಂಡಿದ್ದು ಜಪಾನ್ ತಂಡವೇ. ಆ ಪಂದ್ಯದಲ್ಲಿ ಭಾರತ ತಂಡ ಗೋಲುಗಳಿಸಲು ಹೆಣಗಾಡಿದ್ದು ನೋಡಿದರೆ, ಜಪಾನ್ ತಂಡದ ವಿರುದಟಛಿದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂದೆನಿಸದಿರದು. ಜಪಾನೀಯರ ನಡುವಿನ ಹೊಂದಾಣಿಕೆಯೇ ಆ ತಂಡದ ಪ್ರಮುಖ ಅಸ್ತ್ರವಾಗಿದ್ದು, ಅವರು ನೀಡುವ ಲಾಂಗ್ ಪಾಸ್‍ಗಳನ್ನು ಯಶಸ್ವಿಯಾಗಿ ಮುರಿಯುವುದು ಭಾರತ ತಂಡದ ಮುಂದಿರುವ ಮೊದಲ ದೊಡ್ಡ ಸವಾಲು.
ಅದಲ್ಲದೆ, ಜಪಾನ್ ತಂಡದ ಗೋಲು ಗಳಿಸುವ ಅವಕಾಶಗಳನ್ನು ಸಾಧ್ಯವಾದಷ್ಟೂ ವಿಫಲಗೊಳಿಸಬೇಕು. ಜಪಾನ್‍ಗೆ ಹೋಲಿಸಿದರೆ, ಪೆನಾಲ್ಟಿ ಕಾರ್ನರ್ ವಿಚಾರದಲ್ಲಿ ಭಾರತ ತಂಡ ಮುಂದಿದೆ. ವಿ.ಆರ್. ರಘುನಾಥ್, ರೂಪಿಂದರ್‍ಪಾಲ್ ಸಿಂಗ್ ಹಾಗೂ ಹರ್ಮನ್‍ಪ್ರೀತ್ ಸಿಂಗ್ ಅವರಂಥ ಪೆನಾಲ್ಟಿ `ತಜ್ಞ'ರು ಭಾರತ ತಂಡದ ಪ್ರಮುಖ ಶಕ್ತಿಬಿಂದುಗಳು. ಇದರ ಜೊತೆಗೆ ವಿಶ್ವದರ್ಜೆಯ ಗೋಲ್‍ಕೀಪರ್ ಪಿ.ಆರ್. ಶ್ರೀಜೇಶ್ ಇರುವುದು ತಂಡಕ್ಕೆ ಆನೆಬಲವಿದ್ದಂತೆ. ಆದರೂ, ಮುಂಗಳವಾರದ ಪಂದ್ಯದಲ್ಲಿ ಗೆಲವು ಪಡೆಯಬೇಕಾದರೆ, ಜಪಾನ್ ತಂಡದ ವಿರುದ್ಧ ಭಾರತ ಸಡ್ಡುಹೊಡೆಯಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


