ಕ್ರೀಡೆ

ಕರ್ನಾಟಕಕ್ಕೆ ಭರ್ಜರಿ ಜಯ

ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ...

ಕರ್ನಾಟಕಕ್ಕೆ ಭರ್ಜರಿ ಜಯ
ಕರ್ನಾಟಕಕ್ಕೆ ಭರ್ಜರಿ ಜಯ (ಸಂಗ್ರಹ ಚಿತ್ರ)
Published On :

ಕೊಚ್ಚಿ: ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 8 ವಿಕೆಟ್‍ಗಳ ಗೆಲವು ದಾಖಲಿಸಿದೆ.

ಶುಕ್ರವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆರಂಭಿಸಿತು. ನಂತರ ತಮಿಳುನಾಡು ತಂಡವನ್ನು 13.5 ಓವರ್‍ಗಳಲ್ಲಿ 61 ರನ್‍ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 9.1 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿ ಗೆಲವಿನ ದಡ ಸೇರಿತು. ತಮಿಳುನಾಡು ತಂಡದ ಪರ ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‍ಮನ್ ಎರಡಂಕಿ ರನ್ ದಾಖಲಿಸಲಿಲ್ಲ.

ಕರ್ನಾಟಕದ ಪರ ಬೌಲಿಂಗ್‍ನಲ್ಲಿ ಜೆ.ಸುಚಿತ್ 1 ಓವರ್ ಮಾಡಿ 2 ರನ್ ನೀಡಿ 3 ವಿಕೆಟ್ ಪಡೆದರು. ರೋನಿತ್ ಮತ್ತು ಉದಿತ್ ತಲಾ 2 ಹಾಗೂ ನವೀನ್ ಮತ್ತು ಶರತ್ ತಲಾ 1 ವಿಕೆಟ್ ಪಡೆದರು. ಕರ್ನಾಟಕದ ಪರ ಸಮರ್ಥ್ ಅಜೇಯ 24, ಮಾಯಂಕ್ 26, ಕರುಣ್ ಅಜೇಯ 10 ರನ್ ದಾಖಲಿಸಿದರು. ತಮಿಳುನಾಡು ಪರ ಆಂಥೋನಿ ದಾಸ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ತಮಿಳುನಾಡು 13.5 ಓವರ್‍ಗಳಲ್ಲಿ 61
(ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12, ಜೆ.ಸುಚಿತ್ 2ಕ್ಕೆ3)

ಕರ್ನಾಟಕ 9.1 ಓವರ್‍ಗಳಲ್ಲಿ 65
(ಸಮರ್ಥ್ ಅಜೇಯ 24, ಮಾಯಾಂಕ್ 26, ಆಂಥೋನಿ 15ಕ್ಕೆ1)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.