ಕ್ರೀಡೆ

ವರುಣನ ಅವಕೃಪೆ; ಡಕ್ವರ್ಥ್ ಲೂಯಿಸ್ ಪ್ರಕಾರ ನ್ಯೂಜಿಲ್ಯಾಂಡ್ ಟಾರ್ಗೆಟ್:೪೩ ಓವರ್ ೨೯೮ ರನ್

ಆಕ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಮೊದಲ ಸೆಮಿಫೈನಲ್ಸ್ ಪಂದ್ಯ ಬಹಳ ಕುತೂಹಲಕಾರಿ. ಯಾವ ತಂಡ ಗೆದ್ದರೂ

ವರುಣನ ಅವಕೃಪೆ; ಡಕ್ವರ್ಥ್ ಲೂಯಿಸ್ ಪ್ರಕಾರ ನ್ಯೂಜಿಲ್ಯಾಂಡ್ ಟಾರ್ಗೆಟ್:೪೩ ಓವರ್ ೨೯೮ ರನ್
ವಿಶ್ವಕಪ್ ಮೊದಲ ಸೆಮಿಫೈನಲ್ಸ್ ಪಂದ್ಯದ ಆರಂಭಿಕ ಕ್ಷಣಗಳು
Published On :

ಅಪ್ಡೇಟ್: ಕ್ರಿಕೆಟ್ ವಿಶ್ವಕಪ್ ಮೊದಲ ಸೆಮಿ ಫೈನಲ್ಸ್ ಪಂದ್ಯ ವರುಣನ ಅವಕೃಪೆಗೆ ಒಳಗಾಗಿದ್ದರಿಂದ, ಪಂದ್ಯದ ಓವರ್ ಗಳನ್ನು ೪೩ ಕ್ಕೆ ಇಳಿಸಲಾಯಿತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಅಂತ್ಯದಲ್ಲಿ ೪೩ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೮೧ ರನ್ ಗಳಿಸಿದ್ದರಿಂದ, ಡಕ್ವರ್ಥ್ ಲೂಯಿಸ್ ಲೆಕ್ಕಾಚಾರದ ಪ್ರಕಾರ ನ್ಯೂಜಿಲ್ಯಾಂಡ್ ಗೆಲ್ಲಲು ೪೩ ಓವರ್ ಗಳಲ್ಲಿ ೨೯೮ ರನ್ ಗಳಿಸಬೇಕಾಗಿದೆ.

ಗುಪ್ತಿಲ್ ಮತ್ತು ಬ್ರೆಂಡನ್ ಮ್ಯಾಕ್ಕಲಂ ನ್ಯೂಜಿಲ್ಯಾಂಡ್ ತಂಡಕ್ಕೆ ಬ್ಯಾಟಿಂಗ್ ಆರಂಭಿಸಿದ್ದಾರೆ. ಇಲ್ಲಿಯವರೆಗೂ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಗುಪ್ತಿಲ್ ಮೇಲೆ ಹೆಚ್ಚಿನ ಭರವಸೆ ಇದೆ. ಈ ವರದಿಯ ಸಮಯದಲ್ಲಿ ನ್ಯೂಜಿಲ್ಯಾಂಡ್ ೧.೩ ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೨೨ ರನ್ ಗಳಿಸಿತ್ತು. ಎರಡು ಸಿಕ್ಸರ್ ಗಳೊಂದಿಗೆ ಬ್ರೆಂಡನ್ ಮ್ಯಾಕ್ಕಲಂ ೮ ಬಾಲುಗಳಲ್ಲಿ ೧೭ ರನ್ ಗಳಿಸಿದ್ದರು.

ಆಕ್ಲ್ಯಾಂಡ್
: ಆಕ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಮೊದಲ ಸೆಮಿಫೈನಲ್ಸ್ ಪಂದ್ಯ ಬಹಳ ಕುತೂಹಲಕಾರಿ. ಯಾವ ತಂಡ ಗೆದ್ದರೂ ಅವರಿಗೆ ಇದು ಮೊದಲ ವಿಶ್ವಕಪ್ ಫೈನಲ್ಸ್ ಆಗಲಿದೆ. ತಮ್ಮ ತವರಿನಲ್ಲೇ ಆಡುತ್ತಿರುವ ನ್ಯೂಜಿಲ್ಯಾಂಡ್ ತಂಡ ಈ ಸರಣಿಯಲ್ಲಿ ಯಾವುದೇ ಪಂದ್ಯವನ್ನು ಸೋಲದೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿದೆ.

ಈ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ನ್ಯೂಜೀಲ್ಯಾಂಡಿನ ಬೋಲ್ಟ್ ಆರಂಭದಲ್ಲೇ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಲು ಯಶಸ್ವಿಯಾದರು. ದಕ್ಷಣಿ ಆಫ್ರಿಕಾ ೩೧ ರನ್ ಗಳಿಸುವಲ್ಲಿ ಎರಡು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸುತ್ತಿತ್ತು. ಈ ಸಮಯದಲ್ಲಿ ಆಸರೆಯಾದವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಎ ಬಿ ಡಿ ವಿಲ್ಲಿಯರ್ಸ್ ಮತ್ತು ಡು ಪ್ಲೆಸ್ಸ್.

ಸದ್ಯದ ವರದಿ ಪ್ರಕಾರ ದಕ್ಷಿಣ ಆಫ್ರಿಕಾ ೩೬.೩ ಓವರುಗಳ್ಲಲಿ ೩ ವಿಕೆಟ್ ನಷ್ಟಕ್ಕೆ ೨೦೨ ರನ್ ಗಳಿಸಿದೆ. ಎ ಬಿ ಡಿ ವಿಲ್ಲಿಯರ್ಸ್ ೩೪ ಎಸೆತಗಳಲ್ಲಿ ೫೩ ರನ್ ಗಳಿಸಿ ಹಾಗೂ ಡು ಪ್ಲೆಸ್ಸ್ ೧೦೧ ಎಸೆತಗಳಲ್ಲಿ ೭೫ ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.