ಕ್ರೀಡೆ

ಕರ್ನಾಟಕಕ್ಕೆ ಮತ್ತೆ ರಣಜಿ ಚಾಂಪಿಯನ್ಸ್ ಮುಕುಟ

ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಜಯ ಗಳಿಸಿದ್ದು, ಸತತ ಎರಡನೇ ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿದೆ.

ಕರ್ನಾಟಕಕ್ಕೆ ಮತ್ತೆ ರಣಜಿ ಚಾಂಪಿಯನ್ಸ್ ಮುಕುಟ
ಕರ್ನಾಟಕ ತಂಡ
Published On :

ಮುಂಬೈ: ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಜಯ ಗಳಿಸಿದ್ದು, ಸತತ ಎರಡನೇ ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 217 ರನ್'ಗಳಿಂದ ಗೆಲುವು ಸಾಧಿಸಿದೆ. ಕೊನೆಯ ದಿನದಾಟ ತಮಿಳುನಾಡು ಎರಡನೇ ಇನ್ನಿಂಗ್ಸ್ 411 ರನ್ನಿಗೆ ಕೊನೆಗೊಂಡಿತು.

ತಮಿಳುನಾಡು ಪರ ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ಶತಕ ಭಾರಿಸಿದ್ದು ವಿಶೇಷ. ಇವರಿಬ್ಬರನ್ನ ಬಿಟ್ಟರೆ, ಬಾಬಾ ಅಪರಾಜಿತ್ ನಿನ್ನೆ 68 ರನ್ ಗಳಿಸಿದ್ದು ಮತ್ತೊಂದು ಗಮನಾರ್ಹ ಮೊತ್ತ.

ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 4 ವಿಕೆಟ್, ಎಸ್.ಅರವಿಂದ್ ಮತ್ತು ವಿನಯ್ ಕುಮಾರ್ ತಲಾ 2 ವಿಕೆಟ್ ಪಡೆದಿದ್ದಾರೆ.

ಸ್ಕೋರು ವಿವರ:
ತಮಿಳುನಾಡು ಮೊದಲ ಇನ್ನಿಂಗ್ಸ್ 62.4 ಓವರ್ 134 ರನ್ ಆಲೌಟ್
ಕರ್ನಾಟಕ ಮೊದಲ ಇನ್ನಿಂಗ್ಸ್ 231.2 ಓವರ್ 762 ರನ್ ಆಲೌಟ್
ತಮಿಳುನಾಡು ಎರಡನೇ ಇನ್ನಿಂಗ್ಸ್ 107.5 ಓವರ್ 411 ರನ್ ಆಲೌಟ್
(ದಿನೇಶ್ ಕಾರ್ತಿಕ್ 120, ವಿಜಯ್ ಶಂಕರ್ 103, ಬಾಬಾ ಅಪರಾಜಿತ್ 68, ಎಂ.ರಂಗರಾಜನ್ 33, ಮುರಳಿ ವಿಜಯ್ 27 ರನ್ - ಶ್ರೇಯಸ್ ಗೋಪಾಲ್ 126/4, ವಿನಯ್ ಕುಮಾರ್ 43/2, ಎಸ್.ಅರವಿಂದ್ 52/2)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.