ಅರ್ಜೆಂಟೈನಾದಲ್ಲಿ ಹೆಲಿಕಾಪ್ಟರ್ ಡಿಕ್ಕಿ: ಒಲಂಪಿಕ್ಸ್ ಕ್ರೀಡಾಪಟುಗಳು ಸೇರಿ10 ಮಂದಿ ಸಾವು
ಫ್ರೆಂಚ್ ಕ್ರೀಡಾ ಪಟುಗಳ ಗುಂಪೊಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣಕ್ಕೆಂದು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಆಗಸದಲ್ಲಿ ಮತ್ತೊಂದು ಹೆಲಿಕಾಪ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಲಂಪಿಕ್ಸ್ ಕ್ರೀಡಾಪಟು ಸೇರಿದಂತೆ 10 ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಅರ್ಜೆಂಟೈನಾ...

ಬ್ಯೂನಸ್ ಐರೀಸ್: ಫ್ರೆಂಚ್ ಕ್ರೀಡಾ ಪಟುಗಳ ಗುಂಪೊಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣಕ್ಕೆಂದು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಆಗಸದಲ್ಲಿ ಮತ್ತೊಂದು ಹೆಲಿಕಾಪ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಲಂಪಿಕ್ಸ್ ಕ್ರೀಡಾಪಟು ಸೇರಿದಂತೆ 10 ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಅರ್ಜೆಂಟೈನಾದಲ್ಲಿ ಮಂಗಳವಾರ ನಡೆದಿದೆ.
ದುರ್ಘಟನೆಯಲ್ಲಿ ಲಂಡನ್ ಒಲಂಪಿಕ್ಸ್ ಚಾಂಪಿಯನ್ ಈಜುಪಟು ಕ್ಯಾಮಿಲ್ಲೆ ಮುಫ್ಫತ್, ಸೇಲರ್ ನಲ್ಲಿ ಚಾಂಪಿಯನ್ ಆಗಿ ಖ್ಯಾತಿಗಳಿಸಿದ್ದ ಫ್ಲಾರೆನ್ಸ್ ಆರ್ಥಡ್ ಹಾಗೂ ಒಲಂಪಿಕ್ ಬಾಕ್ಸರ್ ಅಲೆಕ್ಸಿಸ್ ವಸ್ಟೈನ್ ಸೇರಿದಂತೆ ಟಿವಿ ರಿಯಾಲಿಟಿ ಶೋಗೆ ಸೇರಿದ ಹಲವಾರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೃತರಲ್ಲಿ ಬಹುತೇಕರು ಫ್ರಾನ್ಸ್ ಪ್ರಜೆಗಳಾಗಿದ್ದು, ಅರ್ಜೆಂಟೈನಾಗೆ ಸೇರಿದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಎರಡು ಹೆಲಿಕಾಪ್ಟರ್ ಗಳು ಟಿವಿ ವಾಹಿನಿಗಾಗಿ ಚಿತ್ರವೊಂದರ ಚಿತ್ರೀಕರಣ ನಡೆಸುತ್ತಿದ್ದಾಗ ಈ ಡಿಕ್ಕಿ ಸಂಭಸಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ಎರಡು ಹೆಲಿಕಾಪ್ಟರ್ ಗಳಲ್ಲೂ ಬೆಂಕಿ ಹೊತ್ತಿಕೊಂಡಿದೆ. ನಂತರ ಇದ್ದಕ್ಕಿದ್ದಂತೆ ನೆಲಕ್ಕಪ್ಪಳಿಸಿದೆ ನೋಡನೋಡುತ್ತಿದ್ದಂತೆ ಚಿತ್ರೀಕರಣದಲ್ಲಿ ತೊಡಗಿದ್ದ ಸಿಬ್ಬಂದಿಗಳು ಹಾಗೂ ಕ್ರೀಡಾ ಪಟುಗಳು ಸುಟ್ಟು ಕರಕಲಾಗಿದ್ದರು ಎಂದು ಪ್ರತ್ಯಕ್ಷ ದರ್ಶಿಯೊಬ್ಬ ಮಾಹಿತಿ ನೀಡಿದ್ದಾನೆ ಎಂದು ಲಾ ರಿಯೋಜಾ ಪ್ರಾಂತ್ಯ ಸರ್ಕಾರದ ವಕ್ತಾರ ಡೈಸೆಲ್ ಕುನಿಯೋ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಗಳಿರುವುದಾಗಿ ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


