ಸೆಮಿ ಫೈನಲ್ಸ್ ತಲುಪಿದ ಸೈನಾ
ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾರ್ತಿ, ಮಾಜಿ ವಿಶ್ವ ಚಾಂಪಿಯನ್ ಚೈನಾದ ಯಿಹಾ ವ್ಯಾಂಗ್ ಅವರನ್ನು ೨೧-೯, ೨೧-೬

ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಮಾಜಿ ವಿಶ್ವ ಚಾಂಪಿಯನ್ ಚೈನಾದ ಯಿಹಾ ವ್ಯಾಂಗ್ ಅವರನ್ನು ೨೧-೯, ೨೧-೬ ಅಂತರದಲ್ಲಿ ಮಣಿಸುವುದರೊಂದಿಗೆ ೫ ಲಕ್ಷ ಯು ಎಸ್ ಡಾಲರ್ ಪ್ರಶಸ್ತಿಯ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ಸ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಒಲಂಪಿಕ್ ಕಂಚು ಪ್ರಶಸ್ತಿ ವಿಜೇತೆ ಸೈನಾ ಪಂದ್ಯದ ಪ್ರಾರಂಭದಿಂದಲೂ ಅತ್ಯುತ್ತಮ ಫಾರ್ಮ್ ನಲ್ಲಿದ್ದುದಲ್ಲದೆ, ಯಿಹಾ ಅವರನ್ನು ಆಟದಲ್ಲಿ ಆಕ್ರಮಿಸಿಕೊಳ್ಳಲು ಅವಕಾಶ ನೀಡಲೇ ಇಲ್ಲ. ೩೯ ನಿಮಿಷದ ಈ ಪಂದ್ಯದಲ್ಲಿ ವಿಶ್ವದ ನಂಬರ್ ೩ ಭಾರತದ ಆಟಗಾರ್ತಿ ಒಲಂಪಿಕ್ ಕಂಚಿನ ಪದಕ ವಿಜೇತೆ ಯಿವಾ ವಿರುದ್ಧ ಗೆದ್ದು, ಪಂದ್ಯಗಳ ದಾಖಲೆಯನ್ನು ೨-೮ ಕ್ಕೆ ಉತ್ತಮಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


