ಕೆನಡಾ ಓಪನ್ ಗ್ರ್ಯಾನ್ ಪ್ರೀ ಟೂರ್ನಿ: ಜ್ವಾಲಾ-ಅಶ್ವಿನಿ ಚಾಂಪಿಯನ್
ಭಾರತದ ಯಶಸ್ವಿ ಮಹಿಳಾ ಬ್ಯಾಡ್ಮಿಂಟನ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಭಾನುವಾರ ತಡರಾತ್ರಿ ಮುಕ್ತಾಯಗೊಂಡ 50,000 ಡಾಲರ್...

ಗಾಲ್ಗರಿ(ಕೆನಡಾ): ಭಾರತದ ಯಶಸ್ವಿ ಮಹಿಳಾ ಬ್ಯಾಡ್ಮಿಂಟನ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಭಾನುವಾರ ತಡರಾತ್ರಿ ಮುಕ್ತಾಯಗೊಂಡ 50,000 ಡಾಲರ್ ಮೊತ್ತದ ಕೆನಡಾ ಓಪನ್ ಗ್ರ್ಯಾನ್ ಪ್ರೀ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದರು.
ಮಾರ್ಕಿನ್ ಮೆಕ್‌ಫಾಯಿಲ್ ಸೆಂಟರ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಮೂರನೇ ಶ್ರೇಯಾಂಕಿತ ಭಾರತೀಯ ಜೋಡಿ ಹಾಲೆಂಡ್ ಆಟಗಾರ್ತಿಯರಾದ ಎಫ್ಜೀ ಮುಸ್ಕೆನ್ಸ್ ಹಾಗೂ ಸೆಲೆನಾ ಪೀಕಾಫ್ ಜೋಡಿಯನ್ನು 21-19, 21-16ರ ಎರಡು ನೇರ ಗೇಮ್‌ಗಳಲ್ಲಿ ಮಣಿಸಿ ಪ್ರಶಸ್ತಿ ಪಡೆದರು.
ಆರಂಭದಿಂದಲೇ ಆಕ್ರಮಣಕಾರಿ ಹೋರಾಟ ನಡೆಸಿದ ಜ್ವಾಲಾ ಹಾಗೂ ಅಶ್ವಿನಿ ಪ್ರತಿಸ್ಪರ್ಧಿಗಳನ್ನು ಹೆಜ್ಜೆ ಹೆಜ್ಜೆಗೂ ಹೈರಾಣಾಗಿಸಿದರು. ಮೊದಲ ಗೇಮ್‌ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದ ಡಚ್ ಆಟಗಾರ್ತಿಯರು ಎರಡನೇ ಗೇಮ್‌ನಲ್ಲಿ ಬಹು ಸುಲಭವಾಗಿ ಮಣಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


