ನಾರ್ವೆ ಚೆಸ್ ಟೂರ್ನಿ: ವಿಶ್ವನಾಥನ್ ಆನಂದ್ ಗೆ 5ನೇ ಸ್ಥಾನ
ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಟೂರ್ನಿಯ ಪೂರ್ವಭಾವಿ ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ...

ಸ್ಟಾವೆಂಜರ್: ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಟೂರ್ನಿಯ ಪೂರ್ವಭಾವಿ ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಪೂರ್ವಭಾವಿ ಸುತ್ತಿನಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ, ಟೂರ್ನಿಯ ಪ್ರಮುಖ ಸುತ್ತಿನ ಪಂದ್ಯಗಳಲ್ಲಿ ಯಾರ್ಯಾರು ಮುಖಾಮುಖಿಯಾಗಲಿದ್ದಾರೆಂಬುದು ನಿರ್ಧಾರವಾಗುತ್ತದೆ.
ಮಂಗಳವಾರದಿಂದ ಈ ಟೂರ್ನಿ ಮುಖ್ಯ ಪಂದ್ಯಗಳ ಸುತ್ತು ಆರಂಭವಾಗಿದೆ. ಇದಕ್ಕೂ ಮುನ್ನ ಸೋಮವಾರ ನಡೆದ ಪೂರ್ವಭಾವಿ ಸುತ್ತಿನಲ್ಲಿ ವಿಶ್ವನಾಥನ್ ಆನಂದ್ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು.
ನಂತರ ಗೆಲುವಿನ ಅವಕಾಶ ಕೈ ಚೆಲ್ಲಿದರು. ಇನ್ನು ಅಂತಿಮ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಅವರ ವಿರುದ್ಧ ಸೋಲನುಭವಿಸಿದರು. ಈ ಮೂಲಕ 9 ಅಂಕಗಳ ಪೈಕಿ 5.5 ಅಂಕ ಸಂಪಾದಿಸಿದ ಆನಂದ್ 5ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಆನಂದ್ ಅರ್ಧಕ್ಕಿಂತ ಹೆಚ್ಚು ಅಂಕ ಪಡೆದಿರುವ ಹಿನ್ನೆಲೆಯಲ್ಲಿ ಪ್ರಮುಖ ಸುತ್ತಿನಲ್ಲಿ ಒಟ್ಟು 5 ಬಿಳಿಕಾಯಿ ಪಂದ್ಯವನ್ನಾಡಲಿದ್ದಾರೆ. ಈ ಟೂರ್ನಿಯನ್ನು ಕ್ಲಾಸಿಕ್ ಮಾದರಿಯಲ್ಲಿ ಆಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


