ಕ್ರೀಡೆ

ಟೆನ್ನಿಸ್ ಸಿಂಗಲ್ಸ್ ಶ್ರೇಯಾಂಕದಲ್ಲಿ ನೊವಾಕ್ ಡಿಜೊಕೊವಿಕ್ ಗೆ ಅಗ್ರ ಸ್ಥಾನ

ಸೈಬೀರಿಯನ್ ಟೆನಿಸ್ ಆಟಗಾರ ನೊವಾಕ್ ಡಿಜೊಕೊವಿಕ್, (ಎ.ಟಿ.ಪಿ) ವಿಶ್ವದ ಸಿಂಗಲ್ಸ್ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಟೆನ್ನಿಸ್ ಸಿಂಗಲ್ಸ್ ಶ್ರೇಯಾಂಕದಲ್ಲಿ ನೊವಾಕ್ ಡಿಜೊಕೊವಿಕ್ ಗೆ ಅಗ್ರ ಸ್ಥಾನ
ನೊವಾಕ್ ಡಿಜೊಕೊವಿಕ್
Published On :

ಲಂಡನ್: ಸೈಬೀರಿಯನ್ ಟೆನ್ನಿಸ್  ಆಟಗಾರ ನೊವಾಕ್ ಡಿಜೊಕೊವಿಕ್, ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಶನಲ್ಸ್(ಎ.ಟಿ.ಪಿ) ನ ವಿಶ್ವದ ಸಿಂಗಲ್ಸ್ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡಿದ್ದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್, ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. ಇದೀಗ 13,845 ಅಂಕಗಳ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಇ.ಎಫ್.ಇ ವರದಿ ಮಾಡಿದೆ.

ಸ್ವಿಸ್ ರೋಜರ್ ಫೆಡರರ್ ಎರಡನೇ ಸ್ಥಾನ ಹಾಗೂ ನಂತರದ ಸ್ಥಾನವನ್ನು ಸ್ಕಾಟ್ಲೆಂಡ್ ನ ಆಂಡಿ ಮುರ್ರೆ ಪಡೆದಿರುವುದರಿಂದ ಈ ವಾರದಲ್ಲಿ ರ್ಯಾಂಕಿಂಗ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಫ್ರೆಂಚ್ ಓಪನ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ  5,790 ಅಂಕಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

 ಎಟಿಪಿ ರ್ಯಾಂಕಿಂಗ್ ವಿವರ ಇಂತಿದೆ

*ನೊವಾಕ್ ಜೊಕೊವಿಕ್(ಸೈಬೀರಿಯಾ) - 13,845 ಅಂಕ

*ರೋಜರ್ ಫೆಡರರ್(ಸ್ವಿಜರ್ಲ್ಯಾಂಡ್)- 9,165  ಅಂಕ

*ಆಂಡಿ ಮುರ್ರೆ (ಸ್ಕಾಟ್ಲೆಂಡ್) 7,040 ಅಂಕ

4. ಸ್ಟಾನಿಸ್ಲಾಸ್ ವಾವ್ರಿಂಕಾ (ಸ್ವಿಜರ್ಲ್ಯಾಂಡ್) 5,790 ಅಂಕ

5. ಕೇಯ್ ನಿಷಿಕೊರಿ (ಜಪಾನ್) 5,570 ಅಂಕ

6. ಬರ್ಡಿಕ್ (ಜೆಕ್ ರಿಪಬ್ಲಿಕ್) 5,050 ಅಂಕ

7. ಡೇವಿಡ್ ಫೆರರ್ (ಸ್ಪೇನ್) 4,490 ಅಂಕ

8. ಮಿಲೊಸ್ Raonic (ಕೆನಡಾ) 4,440 ಅಂಕ

9. ಮರಿನ್ ಸಿಲಿಕ್ (ಕ್ರೊಯೇಷಿಯಾ) 3,540 ಅಂಕ

10. ರಫೆಲ್ ನಡಾಲ್ (ಸ್ಪೇನ್) 3,135 ಅಂಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.