ಕ್ರೀಡೆ

ಕಿವೀಸ್ ಗೆ ಮಣಿದ ಆಂಗ್ಲರು

ಕೆನ್ನಿಂಗ್ ಟನ್ ಓವಲ್ ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ರೋಚಕ 13 ರನ್ ಗಳ ಜಯ ದಾಖಲಿಸಿದೆ.

ಕಿವೀಸ್ ಗೆ ಮಣಿದ ಆಂಗ್ಲರು
ವಿಕೆಟ್ ಪಡೆದ ಖುಷಿಯಲ್ಲಿ ನ್ಯೂಜಿಲೆಂಡ್ ಆಟಗಾರರು
Published On :

ಲಂಡನ್: ಕೆನ್ನಿಂಗ್ ಟನ್ ಓವಲ್ ನಲ್ಲಿ ನಡೆದ  ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ರೋಚಕ 13 ರನ್ ಗಳ ಜಯ ದಾಖಲಿಸಿದೆ.

ನ್ಯೂಜಿಲೆಂಡ್ ನೀಡಿದ  398 ರನ್ ಗಳ ಬೃಹತ್ ಮೊತ್ತವನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ನಿಗದಿತ (ಡಕ್ವರ್ಥ ಲೂಯಿಸ್ ನಿಯಮದನ್ವಯ) 46 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 365 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ಎದುರು 13 ರನ್ ಗಳ ರೋಚಕ ಸೋಲು ಕಂಡಿತು. ಇಂಗ್ಲೆಂಡ್ ಪಡೆಯು ನಾಯಕ ಇಯಾನ್ ಮಾರ್ಗನ್ (88 ರನ್, 6 ಬೌಂಡರಿ , 6 ಸಿಕ್ಸರ್) ಹಾಗೂ ಹೇಲ್ಸ್ (54 ರನ್, 6 ಬೌಂಡರಿ, 3 ಸಿಕ್ಸರ್‌)ಉತ್ತಮವಾಗಿ ಆಡಿದರಾದರೂ ಗೆಲುವಿನ ರನ್ ಗಳನ್ನು ಧಾಖಲಿಸುವಲ್ಲಿ ವಿಫಲರಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗಪ್ಟಿಲ್ (50 ರನ್), ವಿಲಿಯಮ್ಸನ್ (93 ರನ್),  ಟೇಲರ್ (119 ರನ್ )ಅವರ ಅಮೋಘ ಆಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 398 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಉತ್ತಮವಾಗಿ ಬ್ಯಾಟ್ ಮಾಡಿ ನ್ಯೂಜಿಲ್ಯಾಂಡ್ ಗೆಲುವಿನಲ್ಲಿ ಮಹತ್ತರ  ಪಾತ್ರ ವಹಿಸಿದ ರಾಸ್ ಟೇಲರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಮೊದಲ ಪಂದ್ಯವನ್ನು ಸೋತಿದ್ದ ನ್ಯೂಜಿಲೆಂಡ್ ಈ ಗೆಲುವಿನಿಂದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್  50 ಓವರ್‌ಗಳಲ್ಲಿ  398

ಮಾರ್ಟಿನ್ ಗುಪ್ಟಿಲ್ (50,  6 ಬೌಂಡರಿ, 1 ಸಿಕ್ಸರ್), ಬ್ರೆಡಂ ಮೆಕುಲುಂ (39,  5 ಬೌಂಡರಿ, 2 ಸಿಕ್ಸರ್), ಕೇನ್ ವಿಲಿಯಮ್ಸ್ (93,  12 ಬೌಂಡರಿ, 1 ಸಿಕ್ಸರ್), ರಾಸ್ ಟೇಲರ್ (119, 10 ಬೌಂಡರಿ, 4 ಸಿಕ್ಸರ್)

ಇಂಗ್ಲೆಂಡ್ ಬೌಲಿಂಗ್:
ಸ್ಟೀವನ್ ಫಿನ್: 10-1-69-1, ಜೋರ್ಡನ್:9-0-97-1, ಪುಲ್‌ಕೇಟ್: 9-0-71-1, ಬೆನ್ ಸ್ಟ್ರೋಕ್ಸ್: 9-0-66-2

ಇಂಗ್ಲೆಂಡ್: 46 ಓವರ್‌ಗಳಲ್ಲಿ 379 ರನ್
ರಾಯ್ (39, 6 ಬೌಂಡರಿ), ಹಾಲ್ಸ್ (54, 6 ಬೌಂಡರಿ, 3 ಸಿಕ್ಸರ್), ಇಯಾನ್ ಮಾರ್ಗನ್ (88, 6 ಬೌಂಡರಿ, 6 ಸಿಕ್ಸರ್), ಜೋಸ್ ಬಟ್ಲರ್ (41 , 4 ಬೌಂಡರಿ, 1 ಸಿಕ್ಸರ್), ಪುಲ್‌ಕೆಟ್ (44, 2 ಬೌಂಡರಿ, 3 ಸಿಕ್ಸರ್)

ನ್ಯೂಜಿಲೆಂಡ್ ಬೌಲಿಂಗ್:
ಟ್ರೆಂಟ್‌ಬೋಲ್ಡ್: 10-1-53-2, ಮೆಕ್‌ಲೆಗನ್: 9-0-61-2, ನೆಥಾನ್ ಮೆಕಲಂ: 9-0-86-3, ಸ್ಯಾಂಟ್‌ನೇರ್: 7-0-73-2

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.