ಡ್ರಾದತ್ತ ಮುಖ ಮಾಡಿದ ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯ
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಪಂದ್ಯದ 4ನೇ ದಿನವೂ ವರುಣನ ಆರ್ಭಟ ಮುಂದುವರೆದಿದ್ದು, ಪಂದ್ಯ ಡ್ರಾದತ್ತ ಸಾಗಿದೆ...

ಫಾತುಲ್ಲಾ: ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಪಂದ್ಯದ 4ನೇ ದಿನವೂ ವರುಣನ ಆರ್ಭಟ ಮುಂದುವರೆದಿದ್ದು, ಪಂದ್ಯ ಡ್ರಾದತ್ತ ಸಾಗಿದೆ.
ನಾಲ್ಕನೇ ದಿನದ 2 ಹಾಗೂ ಮೂರನೇ ಅವಧಿಯಲ್ಲಿ ಮಳೆರಾಯ ಆಗಮಿಸಿದ್ದರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕೈಕ ಟೆಸ್ಟ್ ಪಂದ್ಯ ನೀರಸ ಡ್ರಾದತ್ತ ಮುಖಮಾಡಿದೆ. ಮಳೆ ಬಿಡುವು ನೀಡಿದ ಸಮಯದಲ್ಲಿ ಮೊದಲ ಇನಿಂಗ್ಸ್ ಡಿಕ್ಲೇರ್ ಘೊಷಿಸಿ ಆತಿಥೇಯರಿಗೆ ಬ್ಯಾಟಿಂಗ್ ಅವಕಾಶ ನೀಡಿದ ಭಾರತ ತಂಡ ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮೂರನೇ ದಿನದಾಟ ಮೊತ್ತ 6 ವಿಕೆಟ್ಗೆ 462 ರನ್ಗೆ ಶನಿವಾರ ಡಿಕ್ಲೇರ್ ಘೊಷಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾ ತಂಡಕ್ಕೆ ಬ್ಯಾಟಿಂಗ್ ನೀಡಿದರು. ನಾಲ್ಕನೇ ದಿನ ಬಾಂಗ್ಲಾ ದಾಂಡಿಗರ ಕಂಗೆಡಿಸಿದ ಭಾರತದ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಮತ್ತು ಹರ್ಭಜನ್ ಸಿಂಗ್ ಪ್ರಮುಖ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಉತ್ತಮವಾಗಿ ಬೌಲಿಂಗ್ ಮಾಡಿದ ಆರ್.ಅಶ್ವಿನ್ 11.1 ಓವರ್ ಗಳಲ್ಲಿ ಕೇವಲ 30 ರನ್ ತಮೀಮ್ ಇಕ್ಬಾಲ್ ಮತ್ತು ಮುಶ್ಫಿಕರ್ ರೆಹಮಾನ್ ಅವರ ವಿಕೆಟ್ ಪಡೆದಿದ್ದಾರೆ. ಇನ್ನು 7 ಓವರ್ ಗಳನ್ನು ಎಸೆದಿರುವ ಹರ್ಭಜನ್ ಸಿಂಗ್ ಮಾಮಿನುಲ್ ಹಕ್ ಅವರ ವಿಕೆಟ್ ಪಡೆದಿದ್ದಾರೆ.
ಕೇವಲ 30.1 ಓವರ್ ಎದುರಿಸಿದ ಬಾಂಗ್ಲಾ ಪ್ರಮುಖ 3 ವಿಕೆಟ್ ಕಳೆದುಕೊಂಡು 111 ರನ್ ಪೇರಿಸಿದೆ. ಅಲ್ಲದೆ ಇನ್ನೂ 351 ರನ್ ಗಳ ಹಿನ್ನಡೆಯಲ್ಲಿದೆ. ಆಕರ್ಷಕ ಅರ್ಧಶತಕ ಬಾರಿಸಿರುವ ಇಮ್ರುಲ್ ಕಯೇಸ್ ಹಾಗೂ ಖಾತೆ ತೆರೆಯದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 103.3 ಓವರ್ 462 ಕ್ಕೆ 6 ಡಿಕ್ಲೇರ್
ಶಿಖರ್ ಧವನ್ 173, ಮುರಳಿ ವಿಜಯ್ 150, ಅಜಿಂಕ್ಯ ರಹಾನೆ 98,
ಬೌಲಿಂಗ್
ಶಕೀಬ್ ಉಲ್ ಹಸನ್ 105ಕ್ಕೆ 4, ಜುಬೈರ್ ಹುಸೇನ್ 113 ಕ್ಕೆ 2
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 30.1 ಓವರ್ 111 ಕ್ಕೆ 3
ಇಮರುಲ್ ಕಯೇಸ್ ಅಜೇಯ 59*, ಮೋನಿಮುಲ್ ಹಕ್ 30
ಬೌಲಿಂಗ್
ಆರ್. ಅಶ್ವಿನ್ 30 ಕ್ಕೆ 2, ಹರಭಜನ್ ಸಿಂಗ್ 23 ಕ್ಕೆ 1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


