ಫ್ರೆಂಚ್ ಓಪನ್: ಡಬಲ್ಸ್ ಫೈನಲ್ ನಲ್ಲಿ ಬ್ರಯಾನ್ ಸೋದರರಿಗೆ ಸೋಲು
ಫ್ರೆಂಚ್ ಓಪನ್ ಡಬಲ್ಸ್ ಫೈನಲ್ಸ್ ನಲ್ಲಿ ಅಮೆರಿಕದ ಖ್ಯಾತ ಬ್ರಯಾನ್ ಸಹೋದರರು ಸೋಲು ಕಂಡಿದ್ದು, ಕ್ರೊವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲೊಮೆಲೊ ಅವರು...

ಪ್ಯಾರಿಸ್: ಫ್ರೆಂಚ್ ಓಪನ್ ಡಬಲ್ಸ್ ಫೈನಲ್ಸ್ ನಲ್ಲಿ ಅಮೆರಿಕದ ಖ್ಯಾತ ಬ್ರಯಾನ್ ಸಹೋದರರು ಸೋಲು ಕಂಡಿದ್ದು, ಕ್ರೊವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲೊಮೆಲೊ ಅವರು ಮೊದಲ ಬಾರಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ ಕೋರ್ಟ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್ ನಲ್ಲಿ ಅಮೆರಿಕದ ಖ್ಯಾತ ಬಾಬ್ ಬ್ರಯಾನ್ ಹಾಗೂ ಮೈಕ್ ಬ್ರಯಾನ್ ಸಹೋದರರನ್ನು 6-7(5) 7-6(5) 7-5 ಗಳ ಮೂರು ಸೆಟ್‌ನಿಂದ ಸೋಲಿಸಿದ ಡೊಡಿಗ್ ಹಾಗೂ ಮೆಲೊ ಅವರು ಮೊದಲ ಬಾರಿಗೆ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಅದ್ಭುತ ಪೈಪೋಟಿ ನೀಡಿದ್ದ ಬ್ರಯಾನ್ ಬ್ರದರ್ಸ್ ಪಂದ್ಯದ ಒಂದು ಹಂತದಲ್ಲಿ ತಾವೇ ಪ್ರಶಸ್ತಿ ಪಡೆಯುವ ಆಸೆಯನ್ನು ಅಮೆರಿಕ ಅಭಿಮಾನಿಗಳಲ್ಲಿ ಮೂಡಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೊಡಿಗ್ ಮೈಕ್ ಜೋಡಿ ಬ್ರಯಾನ್ ಸಹೋದರರಿಗೆ ಸೋಲಿನ ರುಚಿ ತೋರಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಕ್ರೊವೇಶಿಯಾದ ಇವಾನ್ ಡೊಡಿಗ್ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದು, ಮೆಲೊ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಬ್ರೆಜಿಲ್‌ನ ಎರಡನೇ ಆಟಗಾರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


