ಶರಪೋವಾಗೆ ಅಚ್ಚರಿಯ ಶಾಕ್
ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ನಿರ್ಣಾಯಕ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಿದೆ...

ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ನಿರ್ಣಾಯಕ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಿದೆ. ಟೂರ್ನಿಯ ಒಂಭತ್ತನೇ ದಿನವಾದ ಸೋಮವಾರ ಡೇವಿಡ್ ಫೆರರ್, ರೋಜರ್ ಫಡರರ್ ಅವರು ಪುರುಷರ ಸಿಂಗಲ್ಸ್‍ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಮೂರನೇ ಬಾರಿಗೆ ಫ್ರೆಂಚ್ ಓಪನ್ ಗೆಲ್ಲುವ ರಷ್ಯಾದ ಆಟಗಾರ್ತಿ ಮಾರಿಯಾ ಶರಪೋವಾ ಅವರ ಕನಸು ಭಗ್ನಗೊಂಡಿದೆ.
ಜೆಕ್ ಗಣರಾಜ್ಯದ ಲೂಸಿ ಸಫಾರೊವಾ ಅವರ ವಿರುದ್ಧದ ಪ್ರೀ ಕ್ವಾರ್ಟರ್ ಹಂತದ ಪಂದ್ಯದಲ್ಲಿ ಅವರು ಸೋಲು ಕಂಡಿದ್ದಾರೆ. ಸೋಮವಾರದ ಪಂದ್ಯಗಳಲ್ಲಿ ಎಲ್ಲರಿಗೂ ಅಚ್ಚರಿ ಹಾಗೂ ಶಾಕ್ ನೀಡಿದ್ದು ಹಾಲಿ ಚಾಂಪಿಯನ್ ಶರಪೋವಾ ಅವರ ಸೋಲು. ಫಿಲಿಪ್-ಚಾಟ್ರಿಯರ್ ಅಂಕಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನ ಪಂದ್ಯದಲ್ಲಿ ಸೆಣಸಿದ ವಿಶ್ವದ 2ನೇ ಶ್ರೇಯಾಂಕದ ಆಟಗಾರ್ತಿ, 13ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಲೂಸಿ ಸಫಾರೊವಾ ವಿರುದ್ಧ 6-7(3-7), 4-6 ಸೆಟ್‍ಗಳ ಅಂತರದಲ್ಲಿ ಸೋಲು ಕಂಡರು.
8ರ ಘಟ್ಟಕ್ಕೆ ಸೆರೆನಾ, ಗಾರ್ಬಿನ್
ಸೋಮವಾರ ನಡೆದ ಇತರ ಪ್ರೀ ಕ್ವಾರ್ಟರ್ ಫೈನಲ್ ಹಂತದ ಪಂದ್ಯಗಳಲ್ಲಿ ನಂಬರ್‍ಒನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಸ್ಪೇನ್‍ನ ಗಾರ್ಬಿನ್ ಕ್ವಾರ್ಟರ್ ಫೈನಲ್‍ಗೆ
ಕಾಲಿಟ್ಟಿದ್ದಾರೆ. ಸ್ವದೇಶದವರಾದ ಸ್ಲಾವಾನ್ ಸ್ಟೀಫನ್ ವಿರುದ್ಧ ಸೆಣಸಿದ ಸೆರೆನಾ, 6-1, 5-7, 3-6 ಸೆಟ್‍ಗಳಲ್ಲಿ ಜಯ ಸಾಧಿಸಿದರು. ಮತ್ತೊಂದು 4ನೇ ಸುತ್ತಿನ ಪಂದ್ಯದಲ್ಲಿ ಸೆಣಸಿದ ಸ್ಪೇನ್‍ನ ಗಾರ್ಬಿನ್ ಮುಗುರುಜಾ ಅವರು, ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ ವಿರುದ್ಧ 3-6, 4-6 ಸೆಟ್‍ಗಳ ಅಂತರದಲ್ಲಿ ಜಯ ಗಳಿಸಿದರು.
ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟ ದಿಗ್ಗಜರು
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಟೆನಿಸ್ ಲೋಕದ ದಿಗ್ಗಜರಾದ ನೊವಾಕ್ ಜೊಕೊವಿಚ್, ರಾಫೆಲ್ ನಡಾಲ್, ರೋಜರ್ ಫೆಡರರ್, ಆ್ಯಂಡಿ ಮರ್ರೆ ಹಾಗೂ ಡೇವಿಡ್ ಫೆರರ್ ಜಯಗಳಿಸಿ ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟಿದ್ದಾರೆ. ಫ್ರಾನ್ಸ್ ನ ರಿಚರ್ಡ್ ಗ್ಯಾಸ್ಕೆಟ್ ವಿರುದಟಛಿ ಸೆಣಸಿದ ನಂಬರ್ ಒನ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ 1-6, 2-6, 6-3 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.
ಮತ್ತೊಂದು ಪಂದ್ಯದಲ್ಲಿ, ಸ್ಪೇನ್‍ನ ರಾಫೆಲ್ ನಡಾಲ್, ಅಮೆರಿಕದ ಜ್ಯಾಕ್ ಸೋಕ್ ವಿರುದ್ಧ 6-3, 6-1, 5-7, 6-2 ಸೆಟ್‍ಗಳ ಅಂತರದಲ್ಲಿ ಗೆಲವು ಪಡೆದರು. ಫ್ರಾಂನ್ಸ್ ನ ಗೇಲ್ ಮೊನ್‍ಫಿಲ್ಸ್ ವಿರುದ್ಧ ಸೆಣಸಿದ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್, 3-6, 6-4, 4-6, 1-6 ಸೆಟ್‍ಗಳ ಅಂತರದಲ್ಲಿ ಗೆಲವು ಸಾ„ಸಿದರೆ, ಅಮೆರಿಕದ ಆ್ಯಂಡಿ ಮರ್ರೆ ಅವರು, ಫ್ರಾನ್ಸ್ ನ ಜೆರೆಮಿ ಚಾರ್ಡಿ ವಿರುದ್ಧ 6-4, 3-6, 6-3, 6-2 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ, ಕ್ರೋವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಸೆಣಸಿದ ಸ್ಪೇನ್‍ನ ಡೇವಿಡ್ ಫೆರರ್, 2-6, 2-6, 4-6 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.
ಕ್ವಾರ್ಟರ್ ಫೈನಲ್‍ನಲ್ಲಿ ನಾನು ಉತ್ತಮ ರೀತಿಯಲ್ಲಿ ಅಂಕ ಪೇರಿಸಿದ್ದೆ. ಆದರೆ, ಸಫಾರೊವಾ ಅವರು ನನಗಿಂತಲೂ ಪ್ರಬುದ್ಧ ಆಟ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ನಾನು ಸೋತಿದ್ದರೂ, ಉತ್ತಮ ಪೈಪೋಟಿ ನೀಡಿದ್ದು ತೃಪ್ತಿ ತಂದಿದೆ.
-ಮಾರಿಯಾ ಶರಪೋವಾ, ರಷ್ಯಾ ಆಟಗಾರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


