ಭೂಮಂಡಲದಾಚೆಗೆ ಕ್ರಿಕೆಟ್ ಟೂರ್ನಿ?
ಮುಂದೊಂದು ದಿನ ಕ್ರಿಕೆಟ್ ಪಂದ್ಯಗಳು ಬೇರೊಂದು ಗ್ರಹದಲ್ಲಿ ನಡೆಯುವುದಾದರೆ ಹೇಗೆ... ನಾವೆಲ್ಲರೂ ರಾಕೆಟ್‌ಗಳಲ್ಲಿ ಕೂತು ಅಲ್ಲಿ ಹೋಗಿ ಆ ಪಂದ್ಯಗಳನ್ನು ವೀಕ್ಷಿಸಿ...

ವಾಷಿಂಗ್ಟನ್(ಅಮೆರಿಕ): ಮುಂದೊಂದು ದಿನ ಕ್ರಿಕೆಟ್ ಪಂದ್ಯಗಳು ಬೇರೊಂದು ಗ್ರಹದಲ್ಲಿ ನಡೆಯುವುದಾದರೆ ಹೇಗೆ... ನಾವೆಲ್ಲರೂ ರಾಕೆಟ್‌ಗಳಲ್ಲಿ ಕೂತು ಅಲ್ಲಿ ಹೋಗಿ ಆ ಪಂದ್ಯಗಳನ್ನು ವೀಕ್ಷಿಸಿ ಬರುವುದಾದರೆ ಹೇಗಿರುತ್ತೆ?....
ಕೇಳುತ್ತಿದ್ದರೇ ಉದ್ವಿಗ್ನತೆಯನ್ನು ಹೆಚ್ಚಿಸುವ ಹಾಗೂ ಅಷ್ಟೇ ಸೊಗಸು ಹಾಗೂ ರೋಚಕತೆಯಿಂದ ಕೂಡಿದ ಇಂಥದ್ದೊಂದು ಪರಿಕಲ್ಪನೆ ಮುಂದೊಂದು ದಿನ ಸಾಕಾರವಾದರೆ ಅಚ್ಚರಿಪಡಬೇಕಿಲ್ಲ. ಏಕೆಂದರೆ, ಮಂಗಳ ಗ್ರಹವನ್ನು ಮಾನವರಿಗೆ 2ನೇ ವಾಸಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿರುವಾಗ, ಅಮೆರಿಕ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ವಿಜ್ಞಾನಿಗಳು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಆಸೆಯನ್ನು ಚಿಗುರಿಸಿದ್ದಾರೆ!
ಹೌದು, ನಾಲ್ಕು ದಿನಗಳ ಹಿಂದಷ್ಟೇ ಭೂಮಿಯನ್ನೇ ಹೋಲುವ ಗ್ರಹವೊಂದು ಸೌರಮಂಡಲದಾಚೆ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದ್ದರು. ಕೆಪ್ಲರ್ -452ಬಿ ಎಂಬ ಆ ಗ್ರಹದ ಬಗ್ಗೆ ಮತ್ತಷ್ಟು ಅಧ್ಯಯನಗಳನ್ನು ನಡೆಸಿರುವ ವಿಜ್ಞಾನಿಗಳು, ಅದರ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಚಾರಗಳನ್ನು ಹೊರಗೆಡವಿದ್ದಾರೆ.
ಅವರ ಪ್ರಕಾರ, ಭೂಮಿಗಿಂತ ಸುಮಾರು 1,400 ಜ್ಯೋತಿರ್ವರ್ಷಗಳ ದೂರದಲ್ಲಿರುವ ಈ ಗ್ರಹದಲ್ಲಿ ಆಮ್ಲಜನಕ ಯಥೇಚ್ಛವಾಗಿದೆ. ಜೀವಸಲು ಭೂಮಿಯಷ್ಟೇ ಉತ್ತಮವಾದ ಪರಿಸರ ಹೊಂದಿರುವ ಆ ಗ್ರಹದ ನೆಲವೆಲ್ಲವೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇಂಗ್ಲೆಂಡಿನಲ್ಲಿರುವ ಕ್ರಿಕೆಟ್ ಮೈದಾನದಲ್ಲಿರುವ ಹಸಿರನ್ನು ಹೋಲುವ ಅಲ್ಲಿನ ನೆಲವೆಲ್ಲಾ ತಂಪಾಗಿದೆ ಎಂದಿರುವ ವಿಜ್ಞಾನಿಗಳು, ಹೆಚ್ಚು ಬಿಸಿಲಿಲ್ಲದ ಆಹ್ಲಾದಕರ ಹವಾಮಾನ ಅಲಿದೆ ಹಾಗೂ ಕ್ರೀಡೆಗಳನ್ನು, ಅದರಲ್ಲೂ ಕ್ರಿಕೆಟ್ ಆಡಿಸಲು ಇದಕ್ಕಿಂತ ಪ್ರಶಸ್ತ ಸ್ಥಳ ಇನ್ನೊಂದಿಲ್ಲ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.
ವಿಜ್ಞಾನಿಗಳ ಬಣ್ಣನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಇಡೀ ಗ್ರಹದ ವಾತಾವರಣ ವೈಫೈನಂಥ ತಂತ್ರಜ್ಞಾನಗಳನ್ನು ಅಳವಡಿಸಲು ಹೆಚ್ಚು ಸಹಕಾರಿಯಾಗಿದೆ ಎಂದಿರುವ ಅವರು, ಇಂಟರ್‌ನೆಟ್ ಬಳಕೆದಾರರ ಹಾಗೂ ಕ್ರಿಕೆಟ್ ಅಭಿಮಾನಿಗಳ ಮುಂದೆ ಒಂದು ಹೊಸ ಊಹಾತ್ಮಕ ಲೋಕವನ್ನೇ ತೆರೆದಿಟ್ಟಿದ್ದಾರೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


