ಆರ್ಚರಿ: ದೀಪಿಕಾ ಮೇಲೆ ಕಣ್ಣು
ರತಿಷ್ಠಿತ ವಿಶ್ವ ಆರ್ಚೆರಿ ಚಾಂಪಿಯನ್ ಶಿಪ್ ಗೆ ಭಾನುವಾರ ಚಾಲನೆ ದೊರೆಯಲಿದ್ದು, ಇದರಲ್ಲಿ ಪಾಲ್ಗೊಂಡಿ ರುವ ಭಾರತದ ಸ್ಪರ್ದಿಗಳು ರಿಂಯೋ ಒಲಿಂಪಿಕ್ಸ್ ..

ಕೋಪನ್ ಹೇಗನ್: ಪ್ರತಿಷ್ಠಿತ ವಿಶ್ವ ಆರ್ಚೆರಿ ಚಾಂಪಿಯನ್ ಶಿಪ್ ಗೆ ಭಾನುವಾರ ಚಾಲನೆ ದೊರೆಯಲಿದ್ದು, ಇದರಲ್ಲಿ ಪಾಲ್ಗೊಂಡಿ ರುವ ಭಾರತದ ಸ್ಪರ್ದಿಗಳು ರಿಂಯೋ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕಾಂಪೌಂಡ್ ಬಿಲ್ಲುಗಾರ್ತಿ ಯರು ಕಂಚಿನ ಪದಕ ಗೆದ್ದಿದ್ದರು. ಇಲ್ಲೂ ಅದೇ ಸಾಧನೆ ಮರುಕಳಿಸಬಹುದು ಎಂಬುದು ಭಾರತದ ಅಭಿಮಾನಿಗಳ ಆಸೆಯಾಗಿದೆ. ಅಲ್ಲದೆ, ಇನ್ನು, ಮಹಿಳೆಯರ ರಿಕರ್ವ್ ವಿಭಾಗದಲ್ಲಿ ವಿಶ್ವದ 8ನೇ ಶ್ರೇಯಾಂಕಿತೆ ದೀಪಿಕಾ ಕುಮಾರಿ ಸ್ಪರ್ಧಿಸುತ್ತಿರುವುದರಿಂದ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾಂಪೌಂಡ್ ಬಿಲ್ಲುಗಾರ್ತಿಯರ ತಂಡದಲ್ಲಿ ಪೂರ್ವಾಶಾ ಶಿಂಧೆ, ವಿ.ಜ್ಯೋತಿ, ಸುರೇಖಾ, ಪಿ.ಲಿಲಿ ಚಾನು ಇದ್ದಾರೆ. ಆದರೆ ಏಷ್ಯನ್ ಕ್ರೀಡಾಕೂಟದಲ್ಲಿ ಪೂರ್ವಾಶ್ ಜ್ಯೋತಿ ಜೊತೆಗೆ ತ್ರಿಷಾ ದೇಬ್ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ತ್ರಿಷಾ ಬದಲಿಗೆ ಲಿಲಿ ಆಗಮಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದ ಲಿಲಿ ಅವರು, ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಲಿಂಪಿಕೇತರ ಕ್ರೀಡೆಯಾದ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತೀಯ ಬಿಲ್ಲುಗಾರರ ಪ್ರದರ್ಶನ ಕೂತೂಹಲಕ್ಕೆಡೆ ಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


